Monday, April 29, 2024
spot_imgspot_img
spot_imgspot_img

ವಿಟ್ಲ: 6 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಕೇರಳ ಮೂಲದ ಬುದ್ದಿಮಾಂದ್ಯ ಯುವಕ; ಸಂತೈಸಿ ಮರಳಿ ಮನೆಗೆ ಸೇರಿಸಿದ SDPI ಕಾರ್ಯಕರ್ತರು

- Advertisement -G L Acharya panikkar
- Advertisement -
suvarna gold
vtv vitla

ವಿಟ್ಲ: ಮಾನಸಿಕ ಅಸ್ವಸ್ಥ ಯುವಕನು ಜ. 9ರಂದು ಒಕ್ಕೆತ್ತೂರಿನಲ್ಲಿ ಅಲೆದಾಡುತ್ತಿರುವುದನ್ನು ಗಮನಿಸಿದ SDPI ಒಕ್ಕೆತ್ತೂರು ಬ್ರಾಂಚ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಗೂ ಕಾರ್ಯಕರ್ತರು ಮತ್ತು ಊರಿನ ನಾಗರಿಕರ ಸಹಕಾರದೊಂದಿಗೆ ಅವರನ್ನು ಸ್ನಾನ ಮಾಡಿಸಿ, ಗಡ್ಡ ಮತ್ತು ಕೂದಲು ಕತ್ತರಿಸಿ, ಬಟ್ಟೆ ತೊಡಿಸಿ , ಊಟ ನೀಡಿದರು.

vtv vitla

ಹೀಗೆ ಅವರನ್ನು ವಿಚಾರಿಸಿದಾಗ ಇವರು ಕೇರಳದ ಕೊಡುಂಗಲ್ಲೂರು ಮೂಲದ ಫೈಝಲ್ ಎಂದು ತಿಳಿದು ಬಂದಿದೆ. ತಕ್ಷಣವೇ ಕೊಡುಂಗಲ್ಲೂರು ಪೊಲೀಸ್ ಠಾಣೆ ಗೆ ಕರೆ ಮಾಡಿ ಸಂಪರ್ಕಿಸಿದಾಗ ಪೊಲೀಸರು ಅವರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು “ಈತ ಕಾಣೆಯಾಗಿ ಸುಮಾರು 6 ತಿಂಗಳು ಕಳೆಯಿತು. ಅಕ್ಕಪಕ್ಕದ ಎಲ್ಲಾ ಪೊಲೀಸ್ ಠಾಣೆಗೆ ನಾವು ಈತನ ಬಗ್ಗೆ ವಿಚಾರಿಸಲು ಹೇಳಿದ್ದೇವೆ. ಆದರೆ ನಮಗೆ ಈತನ ಬಗ್ಗೆ ಎಲ್ಲೂ ಸುಳಿವೇ ಸಿಕ್ಕಿಲ್ಲ, ಪ್ರತಿ ವಾರಕ್ಕೊಮ್ಮೆ ಈತನ ಮನೆಯವರು ನಮ್ಮ ಬಳಿ ಬಂದು ಈತನ ಬಗ್ಗೆ ವಿಚಾರಿಸಿ ದುಃಖಿತರಾಗಿ ಮರಳಿ ಹೋಗುತ್ತಿದ್ದರು. ಈತನನ್ನು ಒಂದು ದಿವಸ ನೀವು ನೋಡಿಕೊಳ್ಳಿ. ನಾವು ಅವರ ಕುಟುಂಬಕ್ಕೆ ಈಗಲೇ ಮಾಹಿತಿ ತಿಳಿಸುತ್ತೇವೆ ಎಂದು ಹೇಳಿದರು “.

ತಕ್ಷಣವೇ ಕುಟುಂಬದವರು SDPI ಕಾರ್ಯಕರ್ತರಿಗೆ ಕರೆ ಮಾಡಿ ಕಳೆದು ಹೋದ ಮಗನನ್ನು ಹುಡುಕಿ ಕೊಟ್ಟದ್ದಕ್ಕೆ ಧನ್ಯವಾದವನ್ನು ತಿಳಿಸಿದರು. ಒಟ್ಟಿನಲ್ಲಿ SDPI ಒಕ್ಕೆತ್ತೂರು ಕಾರ್ಯಕರ್ತರು ಮತ್ತು ಊರಿನ ನಾಗರಿಕರ ಸಹಕಾರದಿಂದ ಬುದ್ದಿಮಾಂದ್ಯನಾದ ಫೈಝಲ್ ಅವರನ್ನು ಮರಳಿ ಮನೆಗೆ ಸೇರಿಸಿದ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

- Advertisement -

Related news

error: Content is protected !!