Wednesday, May 1, 2024
spot_imgspot_img
spot_imgspot_img

ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಹೃದಯಾಘಾತ; ದಿಢೀರ್​ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ ಕೇಂದ್ರ ಸಚಿವ

- Advertisement -G L Acharya panikkar
- Advertisement -

ನವದೆಹಲಿ: ನೆನ್ನೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕೊರೊಬ್ಬರು ಲಘು ಹೃದಾಯಾಘಾತಕ್ಕೆ ಒಳಗಾಗಿದ್ದಾರೆ. ಈ ವೇಳೆ ಅದೇ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ವೃತ್ತಿಯಿಂದ ವೈದ್ಯರು ಮತ್ತು ಹಾಲಿ ಕೇಂದ್ರ (ಹಣಕಾಸು ರಾಜ್ಯ ದರ್ಜೆ) ಸಚಿವರು ಆಗಿರುವ ಡಾ.ಭಾಗವತ್ ಕೃಷ್ಣ ರಾವ್​ ಕರದ್ ವ್ಯಕ್ತಿಗೆ ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಹ ಪ್ರಯಾಣಿಕ ಹೃದಯಾಘಾತದಿಂದ ಬಳಲುತ್ತಿದ್ದಂತೆ ವಿಮಾನದಲ್ಲಿ ಯಾರಾದರು ವೈದ್ಯರು ಇದ್ದರೆ ಸಹಾಯಕ್ಕೆ ನೆರವಾಗಲು ಗಗನಸಖಿಯರು ಅನೌನ್ಸ್​​ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರು ವಿಮಾನದಲ್ಲಿ ಲಭ್ಯವಿರುವ ಔಷದೋಪಕರಣಗಳನ್ನು ಬಳಸಿ ಚಿಕಿತ್ಸೆ ನೀಡಿ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಯಾವ ಅಹಂ ಇಲ್ಲದೆ ರೋಗಿಯ ಚಿಕಿತ್ಸೆಯಲ್ಲಿ ನಿರತರಾದ ಸಚಿವರ ಈ ಕಾರ್ಯಾಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ ಪ್ರದಾನಿ ನರೇಂದ್ರ ನೋದಿ ಅವರು ಕೂಡ ಟ್ವೀಟ್​ ಮಾಡಿ ಸಂಪುಟ ಸಹದ್ಯೋಗಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಒಂದು ದಿನದ ಬಳಿಕ ಡಿಸ್ಚಾರ್ಜ್​ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಬಳಿಕ ಕಷ್ಟಕ್ಕೆ ನೆರವಾಗಿದ್ದ ಕೇಂದ್ರ ಸಚಿವರಿಗೆ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿ ಹಾಗೂ ಆತನ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

- Advertisement -

Related news

error: Content is protected !!