Friday, April 19, 2024
spot_imgspot_img
spot_imgspot_img

ಕೋತಿ ಮರಿಗಳಿಗೆ ಬಾಟಲ್​ ಫೀಡಿಂಗ್​ ಮೂಲಕ ಹಾಲುಣಿಸಿ ಜನರ ಮೆಚ್ಚುಗೆ ಗಳಿಸಿ ದ ಮಹಿಳೆ

- Advertisement -G L Acharya panikkar
- Advertisement -

ಮಂಗಗಳನ್ನು ಕಂಡರೆ ಜನ ಕಲ್ಲು ಹೊಡೆಯುವುದು, ಪಟಾಕಿ ಹಚ್ಚಿ ಬೆದರಿಸುವುದು ಸಾಮಾನ್ಯ ಕಪಿಗಳ ಉಪಟಳ ಹೆಚ್ಚಿದಾಗಲೆಲ್ಲ ಜನರು ರೊಚ್ಚಿಗೆದ್ದವರಂತೆ ವರ್ತಿಸಿ ಕ್ರೂರತೆಯನ್ನು ಮೆರೆಯುತ್ತಲೇ ಇರುತ್ತಾರೆ. ಆದರೆ, ಇಲ್ಲೊಬ್ಬರು ಮಹಿಳೆ ಈ ಮಂಗಗಳನ್ನೇ ತಮ್ಮ ಸ್ವಂತ ಮಕ್ಕಳಿಗಿಂತ ಹೆಚ್ಚಾಗಿ ಸಾಕುತ್ತಿದ್ದಾರೆ. 3 ಪುಟಾಣಿ ಕೋತಿ ಮರಿಗಳಿಗೆ ಬಾಟಲ್​ ಫೀಡಿಂಗ್​ ಮೂಲಕ ಹಾಲುಣಿಸುತ್ತಿರುವ ವಿಡಿಯೋ ಜನರ ಮೆಚ್ಚುಗೆ ಗಳಿಸಿದೆ.


ಗಹ್ಲೌತ್​ ಮನೀಶ್​​ ಎಂಬ ಟ್ವಿಟರ್​​ ಬಳಕೆದಾರರೊಬ್ಬರು ಈ ಚೆಂದದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಹಿಳೆ ಕೋತಿ ಮರಿಗಳಿಗೆ ಹಾಲುಣಿಸುತ್ತಿರುವುದು ಕಾಣಸಿಗುತ್ತದೆ.  ಹಸಿದುಕೊಂಡಿರುವ ಪುಟಾಣಿ ಮರಿಗಳು ಮಹಿಳೆಯನ್ನೇ ಸುತ್ತುವರಿದು ಹಾಲು ನೀಡುವಂತೆ ಪೀಡಿಸುತ್ತಿರುವ ಈ ವಿಡಿಯೋ ಎಂಥವರ ಮುಖದಲ್ಲೂ ಮಂದಹಾಸ ಮೂಡಿಸುತ್ತದೆ.

ಇಲ್ಲಿ 3 ಕೋತಿ ಮರಿಗಳಿಗೂ ಚಿಕ್ಕ ಮಕ್ಕಳಿಗೆ ತೊಡಿಸುವಂತೆ ಡೈಪರ್​ ಹಾಗೂ ಟಿ-ಶರ್ಟ್​ ತೊಡಿಸಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಹಿಳೆಯ ಮಾತೃ ಹೃದಯಕ್ಕೆ ನೆಟ್ಟಿಗರು ಮನಸೋತು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ವಿಡಿಯೋದಲ್ಲಿನ ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

- Advertisement -

Related news

error: Content is protected !!