Saturday, May 4, 2024
spot_imgspot_img
spot_imgspot_img

ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಇದರ ಆಶ್ರಯದಲ್ಲಿ 7ನೇ ವರ್ಷದ ಗೋಪೂಜಾ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಶ್ವ ಹಿಂದೂ ಪರಿಷತ್ ಭಜರಂಗದಳ ಘಟಕ ಶ್ರೀ ಕೃಷ್ಣ ಶಾಖೆ ಪೆರುವಾಯಿ ಇದರ ಆಶ್ರಯದಲ್ಲಿ ದೀಪಾವಳಿ ಪ್ರಯುಕ್ತ 7ನೇ ವರ್ಷದ ಗೋಪೂಜಾ ಕಾರ್ಯಕ್ರಮ 30/10/2022 ನೇ ಆದಿತ್ಯವಾರದಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ವಿಜೃಂಭಣೆಯಿಂದ ನಡೆಯಿತು.

ಸಂಜೆ 5.00 ರಿಂದ ಭಜನೆ ಪ್ರಾರಂಭಗೊಂಡು ಬಳಿಕ 6.30 ಕ್ಕೆ ಕಾರ್ತಿಕ ಪೂಜೆ ಹಾಗೂ ಗೋ ಪೂಜೆ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಮುರಳೀಕೃಷ್ಣ ಹಸಂತ್ತಡ್ಕ, ಪ್ರಾಂತ ಸಹ ಸಂಯೋಜಕರು ಭಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಧಾರ್ಮಿಕ ಪರಿಷತ್ ಜಿಲ್ಲಾ ಸದಸ್ಯರು ಪ್ರಮುಖ ಭಾಷಣಗಾರರಾಗಿ ಭಾಗವಹಿಸಿ ಮಾತನಾಡಿದರು.
ಭಜರಂಗದಳ ಪುತ್ತೂರು ಜಿಲ್ಲೆಯಾ ಗೋರಕ್ಷಾ ಪ್ರಮುಖರಾದ ಮಹೇಶ್ ಬಜತ್ತುರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ರಾಜ್ಯದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ರಾಧಾಕೃಷ್ಣ ಮಣಿಯಾಣಿ ತಚ್ಚಮೆ, ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಕೊಯ್ಯೂರು ಬೆಳ್ತಂಗಡಿ ಇವರನ್ನು ಹಾಗೂ ಎಸ್ ಎಸ್ ಎಲ್ ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಪೆರುವಾಯಿ ಗ್ರಾಮದ ಮುಂಚಿರಬೆಟ್ಟು ನಿವಾಸಿ ವಿಶ್ವನಾಥ ಮೂಲ್ಯ ಹಾಗೂ ಲಲಿತಾ ದಂಪತಿಗಳ ಪುತ್ರಿ ಕುಮಾರಿ ರಕ್ಷಿತಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಸದಸ್ಯರಾದ ಶ್ರೀಮತಿ ಕೃಷ್ಣರಾಜೇಶ್ವರಿ, ಧಾರ್ಮಿಕ ಮುಂದಾಳು ಶ್ರೀ ಪ್ರಭಾಕರ ಶೆಟ್ಟಿ ಕಳಾಯಿತ್ತಿಮಾರ್,ವಿಶ್ವ ಹಿಂದೂ ಪರಿಷತ್ತಿನ ಗೌರವಾಧ್ಯಕ್ಷರಾದ ಮಂಜುನಾಥ ಆಚಾರ್ಯ,ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಶೇಖರ ಪೂಜಾರಿ ಕುಂಬಳಕೋಡಿ ಇವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಸಾಶ್ವಿತಾ ಆಚಾರ್ಯ ಹಾಗೂ ವರ್ಷಿತಾ ಆಚಾರ್ಯರವರು ಪ್ರಾರ್ಥಿಸಿದರು.ಬಜರಂಗದಳ ಪ್ರಮುಖರಾದ ಯತೀಶ್ ಪೆರುವಾಯಿ ಸ್ವಾಗತಿಸಿ, ನಿರೂಪಕಿ ಅಶ್ವಿನಿ ಪೆರುವಾಯಿ ಹಾಗೂ ವೀಕ್ಷಿತಾ ಓಣಿಬಾಗಿಲು ರವರು ಪ್ರತ್ಯೇಕವಾಗಿ ವೈಯಕ್ತಿಕ ಗೀತೆ ಹಾಡಿದರು.ಬಜರಂಗದಳ ಪೆರುವಾಯಿ ಘಟಕದ ಸಂಚಾಲಕರಾದ ಮೋಕ್ಷಿತ್ ಪೆರುವಾಯಿಯವರು ವಂದಿಸಿದರು.ಧಾರ್ಮಿಕ ಮುಂದಾಳು ಹಾಗೂ ಉಪಾಧ್ಯಾಯರಾದ ನಾಗೇಶ್ ಮಾಸ್ತರ್ ಪೆರುವಾಯಿ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!