Friday, May 3, 2024
spot_imgspot_img
spot_imgspot_img

ವೀರಕಂಭ: ಮಜಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ

- Advertisement -G L Acharya panikkar
- Advertisement -

ಕಲ್ಲಡ್ಕ: ಮಕ್ಕಳಲ್ಲಿ ಸುಪ್ತವಾಗಿ ಇರುವ ಪ್ರತಿಭೆಯನ್ನು ಹೊರಹಾಕಲು ಒಳ್ಳೆಯ ವೇದಿಕೆಗಳು ಬೇಕು, ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿಯಂತಹ ಕಾಯ೯ಕ್ರಮಗಳು ಉತ್ತಮವಾದ ಅವಕಾಶವನ್ನು ಕಲ್ಪಿಸಿಕೊಡುತ್ತವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಬಂಟ್ವಾಳ ,ಸರಕಾರಿ ಪ್ರಾಥಮಿಕ ಶಾಲೆ ಮಜಿ, ಇದರ ಆಶಯದಲ್ಲಿ ರೋಟರಿ ಕ್ಲಬ್ ಬಿಸಿ ರೋಡ್ ಸಿಟಿ ಇದರ ಸಹಕಾರದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿದ ಮಜಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸಂಜೀವ ಮೂಲ್ಯರವರು ಮಾತನಾಡಿದರು.

ಶಿಕ್ಷಣ ವ್ಯವಸ್ಥೆಯ ಹಲವು ಕಾರ್ಯಕ್ರಮಗಳು ಮಕ್ಕಳ ಉತ್ತಮ ಭವಿಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳಲ್ಲಿ ಇವುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಮಕ್ಕಳ ಭವಿಷ್ಯವು ಉತ್ತಮವಾಗುವಲ್ಲಿ ಇಂತಹ ಕಾಯ೯ಕ್ರಮಗಳು ಬಹುಮುಖ್ಯವಾಗಿದೆ ಎಂದು ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಇದರ ಅಧ್ಯಕ್ಷರಾದ ಪಲ್ಲವಿ ಕಾರಂತ್ ರವರು ತಿಳಿಸಿದರು.

ವೀರಕಂಭ ಗ್ರಾಮಪಂಚಾಯತ್ ನ ಅಧ್ಯಕ್ಷರಾದ ದಿನೇಶ್ ರವರು ಮಾತನಾಡಿ ಸ್ವಧೆ೯ಯಲ್ಲಿ ಭಾಗವಹಿಸುವಿಕೆ ಮುಖ್ಯ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಯಬೇಕು ಆಗ ಮಾತ್ರ ಮಕ್ಕಳಿಗೆ ಇರದ ಅನುಭವವನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಶಿಕ್ಷಣ ಸಂಯೋಜಕಿ ಸುಧಾರವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಈಗಿನ ಶಿಕ್ಷಣ ಪದ್ದತಿಯು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತದೆ. ಕ್ರಿಯಾಶೀಲತೆಯ ಮೂಲಕ ಸಾಧನೆ ಸಾಧಿಸಲು ಹಲವು ಹಂತಗಳಲ್ಲಿ ಪ್ರತಿಭೆಯು ಅರಳಲು ಅವಕಾಶ ಮಾಡಿಕೊಡುತ್ತದೆ ಎಂದು ತಿಳಿಸಿದರು.

ಕಾಯ೯ಕ್ರಮದಲ್ಲಿ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಇದರ ಜಿ.ಎಸ್.ಆರ್. ಪದ್ಮನಾಭ. ರೈ, ಝೋನಲ್ ಲೆಫ್ಟಿನೆಂಟ್ ಸತೀಶ್ ಕುಮಾರ್. ಕೆ, ವೀರಕಂಬ ಗ್ರಾಮಪಂಚಾಯತ್ ಸದಸ್ಯೆ ಜಯಂತಿ, ಮಜಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಮೇಶ್ ಗೌಡ ಮೈರಾ, ಸ್ಪರ್ಧೆಗಳ ಬಹುಮಾನದ ಪ್ರಯೋಜಕರಾದ ಶಾಲಾ ಹಿರಿಯ ವಿಧ್ಯಾರ್ಥಿ ಜಯಪ್ರಕಾಶ್ ತೆಕ್ಕಿಪಾಪು, ಕ್ಷೇತ್ರ ಸಂಪನ್ಮೂಲವ್ಯಕ್ತಿ ನಾಗರತ್ನ, ಸಮೂಹ ಸಂಪನ್ಮೂಲ ವ್ಯಕ್ತಿ ಮೆಡಿಲ್ಡಾ ಲೋಬೋ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿ ಶಿಕ್ಷಕಿ ಶಕುಂತಳಾ ಎಂ. ಬಿ. ವಂದಿಸಿದರು. ಶಿಕ್ಷಕಿ ಸಂಗೀತ ಶಮ೯ರವರು ಕಾರ್ಯಕ್ರಮ ನಿರೂಪಿಸಿದರು. ಸಭಾಕಾಯ೯ಕ್ರಮದ ಬಳಿಕ ಕಲ್ಲಡ್ಕ ಕ್ಲಸ್ಟರ್ ನ ವ್ಯಾಪ್ತಿಯ ಹನ್ನೆರಡು ಶಾಲೆಗಳ ವಿಧ್ಯಾರ್ಥಿಗಳಿಗೆ ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ವೈಯುಕ್ತಿಕವಾಗಿ ಒಟ್ಟು 27 ಸ್ಪಧೆ೯ಗಳು ನಡೆದವು.

ಸಮಾರೋಪ ಸಮಾರಂಭದಲ್ಲಿ ಮಜಿ ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ವಿಜಯ್ ಶೇಖರ್, ಸದಸ್ಯರುಗಳಾದ ಗೋಪಾಲಕೃಷ್ಣ ಭಟ್, ವಿಶ್ವನಾಥ್, ವನಿತಾ, ವೀಣಾ ,ಹರಿಣಾಕ್ಷಿ, ಅಸ್ಲಿಯ, ವೀರಕಂಭ ಪಂಚಾಯತ್ ಸದಸ್ಯೆ ಮೀನಾಕ್ಷಿ, ಬಾಳ್ತಿಲ ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿಸತೀಶ್ ರಾವ್, ಉತ್ತಮ ಸಂಪನ್ಮುಲ ವ್ಯಕ್ತಿ ಪ್ರಶಸ್ತ ವಿಜೇತ ಪ್ರದೀಪ್, ಕಲ್ಲಡ್ಕ ಮಾದರಿ ಶಾಲೆಯ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್, ನೆಟ್ಲ ಶಾಲಾ ಶಿಕ್ಷಕ ಪ್ರವೀಣ್ ಉಪಸ್ಥಿತರಿದ್ದರು ಮಜಿ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿಗಳು ಕಾರ್ಯಕ್ರಮದ ವ್ಯವಸ್ಥಿತ ವ್ಯವಸ್ಥೆಗೆ ಸಹಕರಿಸಿದರು.

- Advertisement -

Related news

error: Content is protected !!