Saturday, April 27, 2024
spot_imgspot_img
spot_imgspot_img

ವೀರಕಂಭ: ಮಜಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ‌ಸಹಯೋಗದಲ್ಲಿ ಮಕ್ಕಳ ದಿನಾಚರಣೆ

- Advertisement -G L Acharya panikkar
- Advertisement -

ವೀರಕಂಭ: ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ 1ರಿಂದ 4 ಮತ್ತು 5 ರಿಂದ 8 ಎಂಬುದಾಗಿ ಎರಡು ಹಂತಗಳಲ್ಲಿ ಕ್ಲೇ ಮೋಡೆಲ್ , ಡ್ರಾಯಿಂಗ್ , ಪಿಕ್ ಆಂಡ್ ಆಕ್ಟ್ , ಕ್ವಿಝ್ , ವಿವಿಧ ರೀತಿಯ ಲಕ್ಕಿ ಗೇಮ್ಸ್ ಗಳನ್ನು ನಡೆಸಲಾಯಿತು. ಜೊತೆಗೆ ಶಾಲಾ ಶಿಕ್ಷಕರಿಗೆ ಮತ್ತು ಪೋಷಕರಿಗೆ ಅದೃಷ್ಟದ ಆಟ ನಡೆಸಲಾಯಿತು.

ದಿನಾಚರಣೆಗಳು ಕೇವಲ ನೆಪಮಾತ್ರಕ್ಕೆ ಸೀಮಿತ ಆಗಿರಬಾರದು ಎಲ್ಲಾ ದಿನಾಚರಣೆಗಳು ತನ್ನದೇ ಆದ ಮಹತ್ವವನ್ನು ಹೊಂದಿರುತ್ತವೆ. ಪ್ರತಿ ದಿನಾಚರಣೆಯ ಮಹತ್ವವನ್ನು ತಿಳಿದು ಆಚರಿಸಿದಾಗ ಮಾತ್ರ ಅದು ಸಾಥ೯ಕತೆಯನ್ನು ಪಡೆಯಲು ಸಾಧ್ಯ. ಇದಕ್ಕೆ ಮಕ್ಕಳ ದಿನಾಚರಣೆಯೂ ಹೊರತಾಗಿಲ್ಲ ಮಕ್ಕಳು ನಮ್ಮ ದೇಶದ ಆಸ್ತಿ ಅವರ ಭವಿಷ್ಯದ ಮೇಲೆ ನಮ್ಮ ದೇಶದ ಭವಿಷ್ಯ ನಿಂತಿದೆ.

ಹಾಗಾಗಿ ಅವರಿಗೆ ಉತ್ತಮ ಸಂಸ್ಕಾರಯುತ ಶಿಕ್ಷಣ ನೀಡಿದಾಗ ದೇಶದ ಉಜ್ವಲತೆ ಕಾಣಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ, ವೀರಕಂಭ ಇಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ‌ಸಹಯೋಗದಲ್ಲಿ ನಡೆದ ಮಕ್ಕಳ ದಿನಾಚರಣೆಯ ಅಂಗವಾಗಿ ವಿವಿಧ ಸ್ಪರ್ಧೆಗಳ ಉದ್ಘಾಟನೆ ಮಾಡಿ ಸಂಸ್ಥೆಯ ಅಧ್ಯಕ್ಷ ಶನ್ಪತ್ ಶೆರೀಫ್ ರವರು ಮಾತನಾಡಿದರು.

ನೆಹರೂರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಮಾಡಲು ಕಾರಣ ಅದರ ಹಿನ್ನೆಲೆಯನ್ನು ತಿಳಿಸಿ ಆದಶ೯ವ್ಯಕ್ತಿಗಳು ನಮ್ಮ ಜೀವನದಲ್ಲಿ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತಾರೆ. ಅವರ ಒಳ್ಳೆಯ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬೆಳೆಯಬೇಕು ಎಂದು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಕಾಯ೯ದಶಿ೯ ಚಿತ್ತರಂಛನ್ ಶೆಟ್ಟಿ ಬೊಂಡಾಲ ಇವರು ಮಾತನಾಡಿದರು.

ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಜೀವನದ ಅತಿ ದೊಡ್ಡ ಹೆಜ್ಜೆ. ಈ ಹಂತದಲ್ಲಿ ಪಡೆದ ಉತ್ತಮ ಕಲಿಕೆಯು ಜೀವನದ ಎಲ್ಲಾ ಸಂದರ್ಭದಲ್ಲಿಯೂ ದಾರಿಯನ್ನು ತೋರುತ್ತದೆ. ಕಲಿಕೆಯು ಕೇವಲ ಪಠ್ಯ ವಿಷಯದಲ್ಲಿ ಸೀಮಿತ ಆಗಿರದೇ ಪಠ್ಯೇತರ ವಿಷಯದಲ್ಲೂ ಹೊಂದಿರುವಂತೆ ಇರಬೇಕು. ಆಗ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ಈಶ್ವರ ಭಟ್ ನಗ್ರಿಮೂಲೆ ಇವರು ತಿಳಿಸಿದರು.

ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮಕ್ಕಳಿಗೆ ನಡೆಸಿದ ಪೇಪರ್ ಬ್ಯಾಗ್ ತಯಾರಿಯ ಪ್ರದಶ೯ನವನ್ನು ವೀಕ್ಷಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನ ವಿತರಿಸಲಾಯಿತು.

ಕಾಯ೯ಕ್ರಮದಲ್ಲಿ ಆನ್ಸ್ ನ ಅಧ್ಯೆಕ್ಷೆ ವಿದ್ಯಾ ಉಮೇಶ್, ಕಾಯ೯ದಶಿ೯ ರಶ್ಮಿ ವಿ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ವಿಜಯಾ ಶೇಖರ್,ಸದಸ್ಯ ಗೋಪಾಲಕೃಷ್ಣ ಭಟ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಸದಸ್ಯರಾದ ಜಯರಾಜ್ ಎಸ್ ಬಂಗೇರ ,ಸುಕುಮಾರ್ ಬಂಟ್ವಾಳ, ಕಿಶೋರ್ ಕುಮಾರ್, ಗಾಯತ್ರಿ ಲೋಕೇಶ್, ನಾರಾಯಣ ಸಿ ಪೆರ್ನೆ, ನೌಶೀದ್ ಆಲ್ ಖಜಾನಾರವರು ಭಾಗವಹಿಸಿದ್ದರು.

ವೀರಕಂಭ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಶಿಕ್ಷಕಿಯರಾದ ಮುಷೀ೯ದಾ ಬಾನು ಹಾಗೂ ಜಯಲಕ್ಷ್ಮಿಯವರು ವಂದಿಸಿದರು. ಶಿಕ್ಷಕಿ ಸಂಗೀತ ಶಮ೯ರವರು ಕಾಯ೯ಕ್ರಮ ನಿರೂಪಿಸಿದರು.

vtv vitla

- Advertisement -

Related news

error: Content is protected !!