Thursday, May 9, 2024
spot_imgspot_img
spot_imgspot_img

ಪುತ್ತೂರು: ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಭೀಕರ ಅಪಘಾತ : ರಿಕ್ಷಾ ಚಾಲಕ ಸ್ಥಳದಲ್ಲೇ ಮೃತ್ಯು

- Advertisement -G L Acharya panikkar
- Advertisement -
This image has an empty alt attribute; its file name is VC_PUC_-1-819x1024.jpg
This image has an empty alt attribute; its file name is shri-energy-solar-667x1024.jpeg

ಪುತ್ತೂರು: ಲೋಕಸಭಾ ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮುಕ್ರಂಪಾಡಿಯಲ್ಲಿ ಎ.27 ರ ನಸುಕಿನ ಜಾವ 2 ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ರಿಕ್ಷಾ ಚಾಲಕ ಜೈಸನ್ (30ವ) ಎಂದು ಗುರುತಿಸಲಾಗಿದೆ.

ಪುತ್ತೂರಿಗೆ ಬರುತ್ತಿದ್ದ ಬಸ್ ಮತ್ತು ವಿರುದ್ಧ ದಿಕ್ಕಿನಿಂದ ಚಲಿಸುತ್ತಿದ್ದ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ರಿಕ್ಷಾ ನಜ್ಜುಗುಜ್ಜಾಗಿದ್ದು, ಚಾಲಕ ಜೈಸನ್ ರಿಕ್ಷಾದ ಒಳಗೆ ಸಿಲುಕಿಕೊಂಡಿದ್ದರು, ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಜೈಸನ್ ಅವರನ್ನು ಹೊರತೆಗೆದಿದ್ದಾರೆ. ಆದರೆ ಜೈಸನ್ ಆಗಲೇ ಮೃತಪಟ್ಟಿದ್ದರು.

- Advertisement -

Related news

error: Content is protected !!