Saturday, June 27, 2026
spot_imgspot_img
spot_imgspot_img

ವೃದ್ಧ ತಂದೆಯನ್ನು ಮನಬಂದಂತೆ ಥಳಿಸಿ ಮನೆಯಿಂದ ಹೊರ ದಬ್ಬಿದ ನಿಷ್ಕರುಣಿ ಮಗ.!

- Advertisement -
- Advertisement -

ರಾಮನಗರ: ವ್ಯಕ್ತಿಯೊಬ್ಬ ಆಸ್ತಿಗಾಗಿ ತನ್ನ ತಂದೆಯನ್ನು ಮನಬಂದಂತೆ ಥಳಿಸಿ, ಮನೆಯಿಂದ ಎಳೆದು ತಂದು ಹೊರ ಹಾಕಿರುವ ಘಟನೆ ರಾಮನಗರದ ಸಿಂಗ್ರಾಬೋವಿಯಲ್ಲಿ ನಡೆದಿದೆ.

ಕೆ.ಎಸ್.ಆರ್.ಟಿ.ಸಿ.ಬಸ್ ಚಾಲಕ ಕುಮಾರ ಎಂಬಾತ ತನ್ನ ತಂದೆಯನ್ನು ಥಳಿಸಿ ಮನೆಯಿಂದ ಹೊರ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ವೃದ್ಧ ತಂದೆ ತಿಮ್ಮಯ್ಯನ ಮೇಲೆ ದಬ್ಬಾಳಿಕೆ ಮಾಡಿ ದರ್ಪ ಮೆರೆದಿದ್ದಾನೆ. ಹಲವು ತಿಂಗಳಿಂದ ಮನೆಯನ್ನು ತನಗೆ ನೀಡುವಂತೆ ಕುಮಾರ ಒತ್ತಡ ಹಾಕುತ್ತಿದ್ದು, ಅದಕ್ಕೆ ತಂದೆ ಒಪ್ಪದಿದ್ದಾಗ ದಿನನಿತ್ಯ ಅಪ್ಪನಿಗೆ ಹೊಡೆದು ದೌರ್ಜನ್ಯವೆಸಗುತ್ತಿದ್ದ ಎನ್ನಲಾಗಿದೆ. ಇದೀಗ ಅಪ್ಪನನ್ನು ಎಳೆದು ಮನೆಯಿಂದ ಹೊರ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

driving
- Advertisement -

Related news

error: Content is protected !!