Sunday, June 7, 2026
spot_imgspot_img
spot_imgspot_img

ಕಾಸರಗೋಡು: ಹಳಿ ತಪಾಸಣೆ ವೇಳೆ ರೈಲು ಬಡಿದು ಟ್ರ್ಯಾಕ್ ಮ್ಯಾನ್ ಮೃತ್ಯು

- Advertisement -
- Advertisement -

ಕಾಸರಗೋಡು: ರೈಲು ಹಳಿ ತಪಾಸಣೆ ನಡೆಸುತ್ತಿದ್ದಾಗ ರೈಲು ಬಡಿದು ಟ್ರ್ಯಾಕ್ ಮ್ಯಾನ್ ಮೃತಪಟ್ಟ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.

ಆಂಧ್ರ ಪ್ರದೇಶ ನವೀನ್ (26)ಮೃತಪಟ್ಟವರು. ಕುಂಬಳೆ ಸಮೀಪದ ಶಿರಿಯ ಸೇತುವೆ ಬಳಿ ಘಟನೆ ನಡೆದಿದೆ. ಬಂದ್ಯೋಡು ಮುಟ್ಟಂನಿಂದ ಶಿರಿಯ ತನಕ ಹಳಿ ತಪಾಸಣೆಗೆ ನವೀನ್‌ಗೆ ನೀಡಲಾಗಿತ್ತು.

ಸೇತುವೆ ಸಮೀಪ ತಪಾಸಣೆಗೆ ನಡೆಸುತ್ತಿದ್ದಾಗ ಮಂಗಳೂರು ಕಡೆಗೆ ತೆರಳುತ್ತಿದ್ದ ಚೆನ್ನೈ ಸೂಪರ್ ಫಾಸ್ಟ್ ರೈಲು ಬಡಿದಿದೆ. ಕೆಲ ಸಮಯದ ಹಿಂದೆಯಷ್ಟೇ ನವೀನ್ ರೈಲ್ವೆ, ಕೆಲಸಕ್ಕೆ ಸೇರಿದ್ದರು. ರೈಲ್ವೆ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!