Sunday, May 19, 2024
spot_imgspot_img
spot_imgspot_img

ವ್ಯಕ್ತಿಯ ಹೊಟ್ಟೆಯಲ್ಲಿ ವೋಡ್ಕಾ ಬಾಟಲಿ; ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆದ ವೈದ್ಯರು!!

- Advertisement -G L Acharya panikkar
- Advertisement -
vtv vitla

ವ್ಯಕ್ತಿಯೊಬ್ಬ ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಹೊಟ್ಟೆಯಿಂದ ವೋಡ್ಕಾ ಬಾಟಲಿಯನ್ನು ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆದ ಘಟನೆ ನೇಪಾಳದಲ್ಲಿ ನಡೆದಿದೆ.

ರೌತಾಹರಿ ಜಿಲ್ಲೆಯ ನುರ್ಸಾದ್‌ ಮನ್ಸೂರಿ ಎಂಬಾತ ಮದ್ಯಪಾನಿಯಾಗಿದ್ದು, ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಈತನನ್ನು ಆಸ್ಪತ್ರೆಗೆ ಕರೆದೊಯ್ಯದ ಸಂದರ್ಭ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ನಡೆಸಿದಾಗ ವಿಚಿತ್ರ ವಸ್ತುವೊಂದು ವ್ಯಕ್ತಿಯ ಹೊಟ್ಟೆ ಸೇರಿರುವುದು ಗೊತ್ತಾಗಿದೆ. ಹೀಗಾಗಿ ಆತನನ್ನು ಶಸ್ತ್ರಚಿಕಿತ್ಸೆಗೊಳಪಡಿಸಿದ್ದು, ಈ ವೇಳೆ ಆತನ ಹೊಟ್ಟೆಯಲ್ಲಿ ವೋಡ್ಕಾ ಬಾಟಲಿ ನೋಡಿ ವೈದ್ಯರೇ ಅಚ್ಚರಿಗೊಂಡಿದ್ದಾರೆ.ನಂತರ ಬಾಟಲಿಯನ್ನು ವೈದ್ಯರು ಸುರಕ್ಷಿತವಾಗಿ ಹೊರ ತೆಗೆದ ಬಳಿಕ ನುರ್ಸಾದ್‌ ಮನ್ಸೂರಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

- Advertisement -

Related news

error: Content is protected !!