Sunday, April 28, 2024
spot_imgspot_img
spot_imgspot_img

ಶಬರಿಮಲೆ ಅರವಣ ಪಾಯಸ ಪ್ರಸಾದದಲ್ಲಿ ಕೀಟನಾಶಕ ಅಂಶ ಪತ್ತೆ ; ವಿತರಣೆಗೆ ಹೈಕೋರ್ಟ್‌ ತಡೆ

- Advertisement -G L Acharya panikkar
- Advertisement -

ಕೊಚ್ಚಿ: ಏಲಕ್ಕಿಯಲ್ಲಿ ಸಾಕಷ್ಟು ಪ್ರಮಾಣದ ಕ್ರಿಮಿನಾಶಕ ಇರುವುದು ಪತ್ತೆಯಾದ ಪರಿಣಾಮ 6.5 ಕೋಟಿ ರೂ. ಮೌಲ್ಯದ ಅಯ್ಯಪ್ಪ ಸ್ವಾಮಿ ಪ್ರಸಾದ ‘ಅರಾವಣಂ’ ಮಾರಾಟಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ.

ಅರವಣ ಪ್ರಸಾದಕ್ಕೆ ಬಳಸಿದ ಏಲಕ್ಕಿಯಲ್ಲಿ 95 ಬಗೆಯ ಕ್ರಿಮಿನಾಶಕಗಳು ಇರುವುದು ಕೆಮಿಕಲ್​ ಟೆಸ್ಟ್​ನಲ್ಲಿ ಖಚಿವಾಗಿದೆ. ಇದರ ಆಧಾರದ ಮೇಲೆ ಕೇರಳ ಹೈಕೋರ್ಟ್​ ಅರಾವಣಂ ವಿತರಣೆಗೆ ತಕ್ಷಣ ತಡೆ ನೀಡಿದೆ. ಅರಾವಣಂ ಇರುವ ಆರೂವರೆ ಲಕ್ಷ ಟಿನ್​ಗಳನ್ನು ಪೂರೈಕೆಗಾಗಿ ಸಂಗ್ರಹ ಮಾಡಲಾಗಿತ್ತು. ಆದರೆ, ಹೈಕೋರ್ಟ್​ ವಿತರಣೆ ಮಾಡದಂತೆ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿಜಿ ಅಜಿತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಹತ್ವದ ನಿರ್ದೇಶನ ನೀಡಿದೆ.

ಏಳು ಟನ್ ಏಲಕ್ಕಿಯನ್ನು ಈ ಬಾರಿ 10. 9 ಲಕ್ಷ ರೂ.ಗೆ ಓಪನ್​​ ಟೆಂಡರ್ ಇಲ್ಲದೆ ಖರೀದಿಸಲಾಗಿದೆ. ಆದರೆ, ಇದೀಗ ಏಲಕ್ಕಿ ಇಲ್ಲದ ಅರಾವಣಂ ಉತ್ಪಾದನೆ ನಿನ್ನೆ (ಜ.11) ರಾತ್ರಿಯಿಂದಲೇ ಆರಂಭವಾಗಿದೆ. ಕೇವಲ ಎಂಟು ಗಂಟೆಗಳಲ್ಲಿ ವಿತರಣೆಗೆ ಸಿದ್ಧವಾಗಲಿದೆ. ಏಲಕ್ಕಿ ರಹಿತ ಅರಾವಣಂ ಇಂದು (ಜ.12) ಬೆಳಗ್ಗೆಯಿಂದ ಕೌಂಟರ್‌ನಲ್ಲಿ ಲಭ್ಯವಿರುತ್ತದೆ. ಎರಡೂವರೆ ಲಕ್ಷ ಟಿನ್ ಅರಾವಣಂ ಅನ್ನು ಏಕಕಾಲದಲ್ಲಿ ತಯಾರಿಸಬಹುದು. ದಿನಕ್ಕೆ ಸರಾಸರಿ ಮೂರು ಲಕ್ಷ ಟಿನ್‌ಗಳು ಮಾರಾಟವಾಗುತ್ತವೆ. ನಿನ್ನೆ ಸಂಜೆ 5 ಗಂಟೆಗೆ ಅರಾವಣಂ ಮಾರಾಟವನ್ನು ಶಬರಿಮಲೆಯಲ್ಲಿ ನಿಲ್ಲಿಸಲಾಗಿತ್ತು. ಸಾವಿರಾರು ಯಾತ್ರಿಕರು ಅರಾವಣಂ ಪಡೆಯದೆ ಹಿಂತಿರುಗಿದರು.

ಅಯ್ಯಪ್ಪ ಸ್ವಾಮಿ ದೇವಸ್ವಂ ಮಂಡಳಿಯ ಪ್ರಕಾರ, 350 ಕೆಜಿ ಅರಾವಣಂನಲ್ಲಿ ಕೇವಲ 750 ಗ್ರಾಂ ಏಲಕ್ಕಿಯನ್ನು ಬಳಸಲಾಗುತ್ತದೆ. ಅರಾವಣಂನಲ್ಲಿ ಅಕ್ಕಿ ಮತ್ತು ಬೆಲ್ಲವೂ ಸಹ ಇದೆ. ಒಟ್ಟಾರೆ ಪದಾರ್ಥಗಳಲ್ಲಿ ಏಲಕ್ಕಿಯು ಕೇವಲ 0. 20 ರಷ್ಟು ಮಾತ್ರ ಬಳಸಿಕೊಳ್ಳಲಾಗುತ್ತದೆ. ಹೀಗಾಗಿ 200 ಡಿಗ್ರಿಗಿಂತ ಹೆಚ್ಚಿನ ತಾಪಮಾನದಲ್ಲಿ ಅರಾವಣಂ ಅನ್ನು ತಯಾರಿಸುವುದರಿಂದ ಅದು ಹಾನಿಕಾರಕವಲ್ಲ ಎನ್ನುವ ಮೂಲಕ ಮಂಡಳಿಯು ಕೋರ್ಟ್​ ಗಮನ ಸೆಳೆಯಲು ಪ್ರಯತ್ನಿಸಿತು. ಆದರೆ, ನ್ಯಾಯಾಲಯವು ಮಂಡಳಿಯ ವಾದಗಳನ್ನು ಸ್ವೀಕರಿಸಲಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ನೀಡುವುದಕ್ಕಾಗಿ ಅಫಿಡವಿಟ್ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಕೋರಿದ ನಂತರ ಅರ್ಜಿಯನ್ನು ಎರಡು ವಾರಗಳ ನಂತರ ಪರಿಗಣನೆಗೆ ಮುಂದೂಡಲಾಯಿತು. ಈ ಬಾರಿ ಮುಕ್ತ ಟೆಂಡರ್ ಕೈಬಿಟ್ಟು ಸ್ಥಳೀಯವಾಗಿ ಖರೀದಿ ಮಾಡಿರುವ ಕ್ರಮದ ವಿರುದ್ಧ ಮಾಜಿ ಗುತ್ತಿಗೆದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

- Advertisement -

Related news

error: Content is protected !!