Thursday, March 28, 2024
spot_imgspot_img
spot_imgspot_img

ಶಾಲಾ ಸಮಯದಲ್ಲಿ ಬದಲಾವಣೆ – ಸಮವಸ್ತ್ರ ಕಡ್ಡಾಯ ಬೇಡ ; ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ

- Advertisement -G L Acharya panikkar
- Advertisement -

ಶಾಲೆ ಆರಂಭ ಮುಂದೂಡಿಕೆ ಬೇಡ ಎಂದು ಹೇಳಿರುವ ಕೇಂದ್ರ ಸರ್ಕಾರ, ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಬೇಸಿಗೆಯ ಕಾರಣ ಸಮವಸ್ತ್ರಗಳನ್ನು ಕಡ್ಡಾಯ ಮಾಡದಂತೆ ಸಲಹೆ ನೀಡಿದೆ. ಕೇಂದ್ರ ಶಿಕ್ಷಣ ಸಚಿವಾಲಯದಿಂದ ರಾಜ್ಯಗಳಿಗೆ ಈ ಕುರಿತಾಗಿ ಸಲಹೆ ನೀಡಲಾಗಿದೆ.

944,082 School Children Stock Photos, Pictures & Royalty-Free Images -  iStock

ದೇಶದ ಅನೇಕ ರಾಜ್ಯಗಳಲ್ಲಿ ಉಷ್ಣ ಮಾರುತದ ಪ್ರಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕೆಂದು ತಿಳಿಸಲಾಗಿದೆ. ಬಿಸಿಲಿನ ಅಡ್ಡ ಪರಿಣಾಮದಿಂದ ಮಕ್ಕಳನ್ನು ರಕ್ಷಿಸಲು ಶಾಲಾ ಸಮಯದಲ್ಲಿ ಬದಲಾವಣೆ, ಸಮವಸ್ತ್ರದಲ್ಲಿ ವಿನಾಯಿತಿ ಸೇರಿದಂತೆ ಹಲವು ಮಾರ್ಪಾಡು ಮಾಡಿಕೊಳ್ಳಲು ಸೂಚಿಸಲಾಗಿದೆ.

No school can deny admission to a child with single parent: Delhi Government

ಶಾಲೆಗಳನ್ನು ಮುಚ್ಚಬಾರದು, ಸಮಯವನ್ನು ಬದಲಾಯಿಸಬೇಕು. ಬೆಳಗ್ಗೆ 7 ಗಂಟೆಯಿಂದಲೇ ಶಾಲೆ ಶುರು ಮಾಡಿ, ತರಗತಿ ಅವಧಿ ಕಡಿತಗೊಳಿಸಿ ಮಧ್ಯಾಹ್ನದ ಒಳಗೆ ಪೂರ್ಣಗೊಳಿಸುವಂತೆ ತಿಳಿಸಲಾಗಿದೆ. ಸಮವಸ್ತ್ರ ಕಡ್ಡಾಯ ಮಾಡಬಾರದು. ಮಕ್ಕಳಿಗೆ ಅನುಕೂಲವಾಗುವ ಬಟ್ಟೆ ಧರಿಸಲು ಅವಕಾಶ ನೀಡಬೇಕು. ಕೊಠಡಿಯ ಹೊರಗಿನ ಚಟುವಟಿಕೆ ಕಡಿಮೆ ಮಾಡಬೇಕು ಶಾಲೆಗಳಲ್ಲಿ ಒ.ಆರ್.ಎಸ್. ಮತ್ತು ಗ್ಲೂಕೋಸ್ ಸಂಗ್ರಹಿಸಿಟ್ಟುಕೊಳ್ಳಬೇಕು. ನೀರು ಕುಡಿಯುವಂತೆ ಮಕ್ಕಳಿಗೆ ಅರಿವು ಮೂಡಿಸಬೇಕು. ಚರ್ಮದ ಶೂ ಬದಲು ಕ್ಯಾನ್ವಾಸ್ ಶೂ ಬಳಸಲು ಅವಕಾಶ ನೀಡಬೇಕೆಂದು ಹೇಳಲಾಗಿದೆ.

- Advertisement -

Related news

error: Content is protected !!