Saturday, May 18, 2024
spot_imgspot_img
spot_imgspot_img

ಶೀಘ್ರ ನಂದಿನಿ ಹಾಲಿನ ದರ ಏರಿಕೆ

- Advertisement -G L Acharya panikkar
- Advertisement -

ಬೆಂಗಳೂರು: ವಿದ್ಯುತ್, ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್, ಖಾದ್ಯ ತೈಲದ ಬೆಲೆ ಹೆಚ್ಚಳವಾಗಿ ಜನಸಾಮಾನ್ಯ ಸಂಕಷ್ಟ ಅನುಭವಿಸುತ್ತಿರುವ ನಡುವೆ ಹಾಲು ಕೂಡಾ ದುಬಾರಿಯಾಗುವ ಲಕ್ಷಣಗಳು ಗೋಚರಿಸುತ್ತಿದೆ.

ಹಾಲು ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಲೀಟರ್ ಗೆ ಕನಿಷ್ಟ ೩ ರಿಂದ ೫ ರೂ.ವರೆಗೆ ದರ ಪರಿಷ್ಕರಣೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ, ಸರ್ಕಾರ ೫ ರೂ. ದರ ಏರಿಕೆಗೆ ಒಪ್ಪುವ ಸಾಧ್ಯತೆಗಳು ಕಡಿಮೆ ಇದ್ದು, ಹಾಲಿನ ಬೆಲೆ ಲೀಟರ್‌ಗೆ ಕನಿಷ್ಠ ೨ ರೂ. ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.

ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಕಳೆದ ೩-೪ ತಿಂಗಳಿಂದ ಕೆಎಂಎಫ್ ಸರ್ಕಾರದ ಒಪ್ಪಿಗೆ ಪಡೆಯಲು ಪ್ರಯತ್ನ ನಡೆಸಿತ್ತಾದರೂ ಸರ್ಕಾರ ದರ ಏರಿಕೆಗೆ ಒಪ್ಪಿರಲಿಲ್ಲ.

ಆದರೆ, ವಿದ್ಯುತ್ ದರ ಏರಿಕೆಯಾದ ಬೆನ್ನಲ್ಲೆ ಹಾಲಿನ ದರವನ್ನೂ ಏರಿಕೆ ಮಾಡಬೇಕೆಂದು ರಾಜ್ಯದ ೧೪ ಹಾಲು ಒಕ್ಕೂಟಗಳು ಕರ್ನಾಟಕ ಹಾಲು ಮಹಾ ಮಂಡಳದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮತ್ತೆ ಮನವಿ ಮಾಡಿವೆ.

ನಷ್ಟ ಹಾಗೂ ನಿರ್ವಹಣೆ ವೆಚ್ಚ ದುಬಾರಿ ಕಾರಣ ನೀಡಿ ದರ ಏರಿಕೆಗೆಕೆಎಂಎಫ್ ಮುಂದಾಗಿದ್ದು ಒಂದು ವೇಳೆ ಸರ್ಕಾರ ಒಪ್ಪಿಗೆ ಸೂಚಿಸಿದರೆ ಹಾಲಿನ ದರವೂ ದುಬಾರಿಯಾಗಲಿದೆ.

- Advertisement -

Related news

error: Content is protected !!