Tuesday, May 14, 2024
spot_imgspot_img
spot_imgspot_img

ಶೀತ-ಜ್ವರ, ಕೆಮ್ಮಿನ ಸಮಸ್ಯೆಗೆ, ತುಳಸಿ ಎಲೆಗಳ ಔಷಧಿ

- Advertisement -G L Acharya panikkar
- Advertisement -

ಕೊರೊನಾದ ಕಾಟ ಮತ್ತೊಮ್ಮೆ ನಿಧಾನಕ್ಕೆ ಜಾಸ್ತಿ ಆಗುತ್ತಿದೆ. ಈ ಸಮಯದಲ್ಲಿ ಸ್ವಲ್ಪ ಶೀತ, ಕೆಮ್ಮು ಅಥವಾ ಜ್ವರ ಬಂದರೂ ಕೂಡ ಭಯ ಶುರು ವಾಗುತ್ತದೆ. ಆದರೆ ಇದಕ್ಕೆಲ್ಲಾ ಭಯ ಪಡುವ ಬದಲು, ಶೀತ ಜ್ವರ ಬಂದ ಸಂದರ್ಭದಲ್ಲಿ ಕೂಡಲೇ ತುಳಸಿ ಎಲೆಗಳನ್ನು ಬಳಸಿದ ಚಹಾ ಕುಡಿಯಿರಿ, ಇಲ್ಲಾಂದ್ರೆ ಹಾಲಿಗೆ ತುಳಸಿ ಎಲೆಗಳನ್ನು ಹಾಕಿ ಕುದಿಸಿ ಕುಡಿದರೆ, ಜ್ವರ, ಶೀತದ ಸಮಸ್ಯೆ ಕಡಿಮೆಯಾಗುತ್ತದೆ.

ಶೀತ, ಕೆಮ್ಮು, ಜ್ವರ ಬರಲು ಬೇಸಿಗೆಯಾದರೇನು ಆದರೇನು ಅಥವಾ ಮಳೆಗಾಲ ಆದರೇನು? ವಾತಾವರಣ ದಲ್ಲಿ ಸ್ವಲ್ಪ ಏರೊಪೇರಾದರೂ ಸಾಕು, ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದು, ಕೂಡಲೇ, ಶೀತ, ಕೆಮ್ಮು ಶುರುವಾಗಿ ಬಿಡುತ್ತದೆ. ಈ ಸಮಯದಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿ ಕೂಡ ಕಡಿಮೆ ಆಗಿ ಬಿಡುವುದರಿಂದ, ಇಂತಹ ಸಣ್ಣ-ಪುಟ್ಟ ಸಮಸ್ಯೆಗಳಿಂದಾಗಿ ಕೊನೆಗೆ ಜ್ವರದ ಸಮಸ್ಯೆ ಕೂಡ ಕಂಡು ಬರುತ್ತದೆ.

ಎಲ್ಲವೂ ಸರಿ ಇರುವಾಗ, ಆರೋಗ್ಯದಲ್ಲಿ ಸಡನ್ ಆಗಿ ಇಂತಹ ಸಮಸ್ಯೆಗಳು ಕಂಡು ಬಂದಾಗ ಟೆನ್ಷನ್ ಆಗಲು ಶುರುವಾಗುತ್ತದೆ. ಯಾಕೆಂದರೆ, ನಮ್ಮನ್ನು ನಂಬಿದ, ಮನೆಯ ಸದಸ್ಯರಿಗೂ ಕೂಡ, ಅಂಟು ರೋಗದಂತೆ, ಈ ಸಣ್ಣ-ಪುಟ್ಟ ಕಾಯಿಲೆಗಳು ಹರಡಿಬಿಡುತ್ತವೆ. ಈಗಿನ ಕೊರೊನಾ ಕಾಲದಲ್ಲಿ ಆರೋಗ್ಯದ ವಿಷ್ಯದಲ್ಲಿ ಎಷ್ಟು ಜಾಗರೂಕತೆ ವಹಿಸುತ್ತೇವೋ, ಅಷ್ಟು ಒಳ್ಳೆಯದು. ಯಾಕೆಂ ದರೆ, ಸ್ವಲ್ಪ ಜ್ವರ ಶೀತ, ಕೆಮ್ಮು ಶುರುವಾದರೆ, ಕೊರೊನಾದ ಭಯ ಶುರುವಾಗಿಬಿಡುತ್ತದೆ! ಹೇಳಿಕೇಳಿ ಈಗಂತೂ ಮಳೆಗಾಲ

ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ, ಹೀಗಾಗಿ ಇಂತಹ ಸಣ್ಣ-ಪುಟ್ಟ ಸಮಸ್ಯೆಗಳಿಗೆ ಮಾನಸಿಕವಾಗಿ ಕುಗ್ಗಿ, ಆಸ್ಪತ್ರೆಯ ಕಡೆಗೆ ಮುಖ ಮಾಡುವುದು ಬಿಟ್ಟು, ಮನೆಯಲ್ಲೇ ಕೆಲವೊಂದು, ಮನೆಮದ್ದುಗಳನ್ನು ಟ್ರೈ ಮಾಡುವುದರಿಂದ, ಇಂತಹ ಸಮಸ್ಯೆಯಿಂದ ಪಾರಾಗಬಹುದು.

ಮೊದಲು ಈ ವಿಷ್ಯ ಗೊತ್ತಿರಲಿ

ಆದಷ್ಟು ಇಂತಹ ಸಣ್ಣ-ಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗಳಿಗೆ ಹೋಗುವ ಬದಲು, ಮನೆಯಲ್ಲಿಯೇ ಕೆಲ ವೊಂದು ಮನೆಮದ್ದುಗಳನ್ನು ಮಾಡಿ ಸೇವನೆ ಮಾಡಿದರೆ ಒಳ್ಳೆಯದು. ಸಾಮಾನ್ಯವಾಗಿ ಇವೆಲ್ಲಾ ಕೊರೊನಾದ ಲಕ್ಷಣಗಳಂತೆ ಇರುವುದರಿಂದ, ಸಾಧಾರಣವಾಗಿ ನೆಗಡಿ ಅಥವಾ ಶೀತ, ಕೆಮ್ಮು ಜ್ವರ ಬಂದಿದ್ದರೂ ಸಹ ಅದನ್ನು ಎಲ್ಲರೂ ಕೊರೊನಾ ಎಂದು ಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಒಂದು ವೇಳೆ ಇಂತಹ ಸಮಸ್ಯೆಗಳು ಒಂದು ವಾರವಾದರೂ ಕೂಡ ಕಡಿಮೆ ಆಗದೇ ಇದ್ದರೆ, ಕೂಡಲೇ ತಡಮಾಡದೇ, ವೈದ್ಯರ ಅನುಮತಿಯನ್ನು ಪಡೆದು, ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ.

ತುಳಸಿ ಎಲೆಗಳನ್ನು ಬಳಸಿ ನೋಡಿ

ನಮ್ಮ ಹಿರಿಯರು ತುಳಸಿ ಗಿಡವನ್ನು ಸಾಕ್ಷಾತ್ ಮಹಾಲಕ್ಷ್ಮಿ‌ಗೆ ಹೋಲಿಸುತ್ತಾರೆ. ಇದರ ಪ್ರತಿ ಯೊಂದು ಎಲೆಗಳಲ್ಲಿಯೂ ಕೂಡ, ಆರೋಗ್ಯ ಪ್ರಯೋಜನಗಳು ಕಂಡುಬರುತ್ತದೆ.
ಅದರಲ್ಲೂ ಪ್ರತಿದಿನ ಒಂದೆರಡು ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಗೆ ಸೇವಿಸುವುದರಿಂದ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಅದರಲ್ಲೂ ಈ ಗಿಡದ ಎಲೆಗಳಲ್ಲಿ ಕಂಡುಬರುವ ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್, ಆಂಟಿ ಇನ್ಫಾಮೇಟರಿ, ಆಂಟಿ ಫಂಗಲ್ ಗುಣಲಕ್ಷಣಗಳು, ಶೀತ ಜ್ವರ ನೆಗಡಿ, ಕೆಮ್ಮಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ.

ತುಳಸಿ ಚಹಾ ತಯಾರು ಮಾಡಿ ಕುಡಿಯಿರಿ

ತುಳಸಿಯ ಎಲೆಗಳಲ್ಲಿ ಔಷಧೀಯ ಗುಣಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದರಿಂದ, ಈ ಎಲೆಗಳನ್ನು ಬಳಸಿ ಚಹಾ ಮಾಡಿ, ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಮಳೆಗಾಲದಲ್ಲಿ ಕಂಡು ಬರುವ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಬಹಳ ಬೇಗನೇ ನಿವಾರಣೆಯಾಗುತ್ತದೆ.
ಇದಕ್ಕಾಗಿ ಸುಮಾರು ನಾಲ್ಕೈದು ತುಳಸಿ ಎಲೆಗಳನ್ನು, ಚೆನ್ನಾಗಿ ತೊಳೆದು, ಕುದಿಯುವ ನೀರಿನಲ್ಲಿ ಹಾಕಿ ಸುಮಾರು ಐದರಿಂದ ಹತ್ತು ನಿಮಿಷಗಳು ಚೆನ್ನಾಗಿ ಕುದಿಸಿ ಆರಿಸಿ. ಆಮೇಲೆ ಸ್ವಲ್ಪ ಉಗುರು ಬೆಚ್ಚಗೆ ಇರುವಾಗಲೇ, ಕುಡಿಯುವ ಅಭ್ಯಾಸ ಮಾಡಿಕೊಂಡು ಬಂದರೆ, ಇಂತಹ ಸಮಸ್ಯೆಯಿಂದ ಪಾರಾಗ ಬಹುದು.

ಇನ್ನು ದಿನಕ್ಕೆ ಎರಡು ಬಾರಿ ಈ ರೀತಿ ಕುಡಿಯುವುದರಿಂದ ಸಾಮಾನ್ಯ ಶೀತ ಜ್ವರದ ಜೊತೆಗೆ ಮಾರಕ ಸಮಸ್ಯೆಗಳಾದ ಮಲೇರಿಯಾ ಮತ್ತು ಡೆಂಗ್ಯೂ ಜ್ವರದಿಂದ ಕೂಡ ದೂರವಿರಬಹುದು, ಎನ್ನುವುದು ವೈದ್ಯರ ಮಾತು.

ಜ್ವರದ ಸಮಸ್ಯೆಗೆ ತುಳಸಿ ಹಾಲು

ಒಂದು ವೇಳೆ, ನೆಗಡಿ, ಶೀತ, ಕೆಮ್ಮಿನ ಸಮಸ್ಯೆಯ ಜೊತೆಗೆ ಜ್ವರದ ಸಮಸ್ಯೆ ಕೂಡ ಇದ್ದರೆ, ಒಂದು ಲೋಟ ಹಾಲನ್ನು ಚೆನ್ನಾಗಿ ಕುದಿಸಿ, ಇದಕ್ಕೆ ಐದಾರು ತುಳಸಿ ಎಲೆಗಳನ್ನು ಮತ್ತು ಒಂದೆರಡು ಪುಡಿ ಮಾಡಿದ ಏಲಕ್ಕಿ ಬೀಜಗಳನ್ನು ಹಾಕಿ ಚೆನ್ನಗಿ ಕುದಿಸಿ, ಬೇದ್ದರೆ ಇದಕ್ಕೆ ಅರ್ಧ ಲೋಟ ನೀರನ್ನು ಕೂಡ ಸೇರಿಸಿಕೊಳ್ಳ ಬಹುದು.
ಇನ್ನು ರುಚಿಗಾಗಿ ಸ್ವಲ್ಪ ಸಕ್ಕರೆ ಬೆರೆಸಿ, ಐದು ನಿಮಿಷದ ಬಳಿಕ ಗ್ಯಾಸ್ ಸ್ಟೌವ್ ಆಫ್ ಮಾಡಿ. ಆಮೇಲೆ ಸೋಸಿಕೊಂಡು, ಉಗುರು ಬೆಚ್ಚಗೆ ಇರುವ ಸಮಯದಲ್ಲಿ ಈ ಪಾನೀಯವನ್ನು ಕುಡಿಯುತ್ತಾ ಬಂದರೆ, ಜ್ವರ ನಿಧಾನವಾಗಿ ಕಡಿಮೆ ಆಗುತ್ತಾ ಹೋಗುತ್ತದೆ

ತುಳಸಿ ಎಲೆಗಳ ರಸ, ಅದ್ಭುತ ಪರಿಹಾರ

ಜ್ವರ ಬಂದ ಸಂದರ್ಭದಲ್ಲಿ ದೇಹದ ತಾಪಮಾನ ಹೆಚ್ಚಿರುತ್ತದೆ. ಈ ಸಮಯದಲ್ಲಿ ತುಳಸಿ ಎಲೆಗಳ ರಸ ನಮ್ಮ ಸಹಾಯಕ್ಕೆ ನಿಲ್ಲುತ್ತದೆ. ಒಂದು ಹಿಡಿಯಷ್ಟು ತುಳಸಿ, ಎಲೆಗಳನ್ನು ಚೆನ್ನಾಗಿ ತೊಳೆದು, ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ ಅದರಿಂದ ರಸ ತೆಗೆದುಕೊಳ್ಳಿ.
ಆಮೇಲೆ ದಿನದಲ್ಲಿ ಎರಡು ಮೂರು ಬಾರಿ, ಕುಡಿಯುವ ನೀರಿಗೆ, ಒಂದು ಚಮಚ ಈ ಎಲೆಗಳ ರಸ ವನ್ನು ಬೆರೆಸಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಕ್ರಮೇಣವಾಗಿ ದೇಹದ ತಾಪಮಾನ ಕಡಿಮೆಯಾಗುತ್ತಾ ಹೋಗುತ್ತದೆ.

- Advertisement -

Related news

error: Content is protected !!