Wednesday, May 15, 2024
spot_imgspot_img
spot_imgspot_img

ಶೋಕಸಾಗರದಲ್ಲಿ ಮುಳುಗಿದ ಟರ್ಕಿ – ಸಿರಿಯಾ…! ಸಾವಿನ ಸಂಖ್ಯೆ 15,000 ಕ್ಕೆ ಏರಿಕೆ

- Advertisement -G L Acharya panikkar
- Advertisement -

ಟರ್ಕಿ: ಭೂಕಂಪದಿಂದ ನಲುಗಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಈ ವರೆಗೆ ಸಾವಿಗೀಡಾದವರ ಸಂಖ್ಯೆ 15,000 ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 12,391 ಮಂದಿ ಸಾವನ್ನ ಪ್ಪಿದ್ದರೆ, ಸಿರಿಯಾದಲ್ಲಿ 2,992ಮಂದಿ ಸಾವನ್ನ ಪ್ಪಿ ದ್ದಾರೆ. ಟರ್ಕಿ-ಸಿರಿಯಾ ಭೂಕಂಪದಿಂದ ಸಾವಿನ ಸಂಖ್ಯೆ 15,000 ದಾಟಿದೆ ಎಂದು ಟರ್ಕಿ ಅಧ್ಯ ಕ್ಷ ರೆಸೆಪ್ ತಯ್ಯಿ ಪ್ ಎರ್ಡೊಗನ್ ಅವರು ದೃಢಪಡಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರುತ್ತಲೇ ಇದೆ .ಹವಾಮಾನ ಪರಿಸ್ಥಿತಿಗಳು ಭೂಕಂಪದಿಂದ ಉಂಟಾದ ವಿನಾಶದ ಪ್ರಮಾಣವನ್ನು ಹೆಚ್ಚಿ ಸಿವೆ ಎಂದು ಅವರು ಹೇಳಿದ್ದಾರೆ. ವಾಯುವ್ಯ ದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ 1,730 ಜನರು ಸಾವನ್ನ ಪ್ಪಿ ದ್ದಾರೆ

2011ರಲ್ಲಿ ಜಪಾನ್ ನಲ್ಲಿ ಭೂಕಂಪನ ಹಾಗೂ ಅದರಿಂದ ಸೃಷ್ಟಿ ಯಾದ ಸುನಾಮಿಗೆ 20000 ಮಂದಿ ಬಲಿಯಾಗಿದ್ದ ರು. ಅದಾದ ನಂತರ ಕಳೆದೊಂದು ದಶಕದ ಅವಧಿಯಲ್ಲಿ ಸಂಭವಿಸಿದ ಘೋರ ಪ್ರಕೃತಿ ವಿಕೋಪ ಈ ಭೂಕಂಪವಾಗಿದೆ.

ಈ ನಡುವೆ ಭೂಕಂಪನದಿಂದಾಗಿ ನೆಲಕಚ್ಚಿ ರುವ ಸಹಸ್ರಾರು ಕಟ್ಟ ಡಗಳ ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಣಾ ಸಿಬ್ಬಂದಿ ಹಗಲು-ರಾತ್ರಿ ಎನ್ನದೆ ರಕ್ಷಿಸಲು ಅತೀವ ಪ್ರಯತ್ನ ಮುಂದುವರೆಸಿದ್ದಾರೆ. ಆದರೆ ರಕ್ಷಣಾ ಸಿಬ್ಬಂದಿ ಸಂಖ್ಯೆ ಕೇವಲ 60 ಸಾವಿರದಷ್ಟಿ ದೆ. ಭೂಕಂಪದಿಂದ ಹಾನಿಗೆ ಒಳಗಾದ ಪ್ರದೇಶಗಳು ಅಪಾರವಾಗಿರುವುದರಿಂದ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವ ಜನರು ನೆರವಿಗಾಗಿ ಮೊರೆ ಇಡುತ್ತಿದ್ದಾರೆ. ಅವರ ಆಕ್ರಂದನ ಮುಗಿಲು ಮುಟ್ಟಿದೆ. ಇದೀಗ ಭಾರತ ಸೇರಿದಂತೆ ಹಲವು ದೇಶಗಳು ಟರ್ಕಿ ಹಾಗೂ ಸಿರಿಯಾದ ಜನರ ರಕ್ಷಣೆ ಹಾಗೂ ಬೆಂಬಲಕ್ಕೆ ನೆರವಾಗಿದೆ.

- Advertisement -

Related news

error: Content is protected !!