Sunday, April 28, 2024
spot_imgspot_img
spot_imgspot_img

ಚಂದ್ರಯಾನ-3; ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್‌ ಲ್ಯಾಂಡರ್‌

- Advertisement -G L Acharya panikkar
- Advertisement -
vtv vitla

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3ರ ಲ್ಯಾಂಡರ್‌ ವಿಕ್ರಮ್‌ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟಿದೆ. ಗುರುವಾರ ಮಧ್ಯಾಹ್ನ 1:15 ಗಂಟೆಗೆ ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಲ್ಯಾಂಡರ್‌ ಮ್ಯಾಡ್ಯೂಲ್‌ ಯಶಸ್ವಿಯಾಗಿ ಬೇರ್ಪಡಿಸಲಾಗಿದೆ.

ಈ ಮಾಹಿತಿಯನ್ನು ಟ್ವಿಟ್ಟರ್‌ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿರುವ ಇಸ್ರೋ, ಲ್ಯಾಂಡರ್‌ ಮ್ಯಾಡ್ಯೂಲ್‌, ಪ್ರೊಪಲ್ಷನ್ ಮಾಡ್ಯೂಲ್ ನಿಂದ ಯಶಸ್ವಿಯಾಗಿ ಬೇರ್ಪಟ್ಟಿದೆ. ನಾಳೆಗೆ ಯೋಜಿಸಲಾದ 1,600 ಗಂಟೆಗಳ ಡಿಬೂಸ್ಟಿಂಗ್‌ ನಂತರ ಚಂದ್ರನ ಮೇಲೆ ಲ್ಯಾಂಡರ್‌ ಇಳಿಯಲಿದೆ. ಪ್ರೊಪಲ್ಷನ್‌ ಮಾಡ್ಯೂಲ್‌ ತಿಂಗಳುಗಳ ಕಾಲ‌ ಅಥವಾ ವರ್ಷಗಳ ವರೆಗೆ ಪ್ರಸ್ತುತ ಕಕ್ಷೆಯಲ್ಲೇ ತನ್ನ ಪ್ರಯಾಣ ಮುಂದುವರಿಸಲಿದೆ ಎಂದು ಮಾಹಿತಿ ಹಂಚಿಕೊಂಡಿದೆ.

‘ಚಂದ್ರಯಾನ-3’ ನೌಕೆಯು ಬುಧವಾರ ಚಂದ್ರನ ಅಂತಿಮ ಕಕ್ಷೆ ಪ್ರವೇಶಿಸಿತ್ತು. ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್‌ ಆಗುವ ಮುನ್ನ ಉಡಾವಣಾ (ಪ್ರೊಪಲ್ಷನ್ ಮಾಡ್ಯೂಲ್‌) ವಾಹನದಲ್ಲಿರುವ ಲ್ಯಾಂಡರ್‌ ಮಾಡ್ಯೂಲ್‌ ‘ವಿಕ್ರಮ್’ ಅನ್ನು ಪ್ರತ್ಯೇಕಗೊಳಿಸುವ ಕಾರ್ಯ ಗುರುವಾರ ನಡೆಯಲಿದೆ ಎಂದು ಹೇಳಿತ್ತು. ಇದೀಗ ʻವಿಕ್ರಮ್‌ʼ ಲ್ಯಾಂಡರ್‌ ಯಶಸ್ವಿಯಾಗಿ ಬೇರ್ಪಟ್ಟಿದ್ದು, ಚಂದ್ರಯನ ಮೇಲೆ ನೌಕೆ ಇಳಿಯುವ ಕನಸು ನನಸಾಗಲು ದಿನಗಣನೆ ಆರಂಭವಾಗಿದೆ.

ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್​​ನ್ನು ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಇಳಿಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಅದು ಚಂದ್ರನ ಮೇಲೆ ಇಳಿದಾಗ, ಲ್ಯಾಂಡರ್ ವಿಕ್ರಮ್ ಪ್ರಗ್ಯಾನ್ ರೋವರ್‌ನ ಚಿತ್ರಗಳನ್ನು ತೆಗೆದುಕೊಳ್ಳುತ್ತದೆ, ಇದು ಚಂದ್ರನ ಮೇಲ್ಮೈಯಲ್ಲಿ ಭೂಕಂಪನ ಚಟುವಟಿಕೆಯನ್ನು ಅಧ್ಯಯನ ಮಾಡಲು ತನ್ನ ಉಪಕರಣಗಳನ್ನು ನಿಯೋಜಿಸುತ್ತದೆ.

ಇನ್ನು ರಷ್ಯಾ ಕೂಡ ಈ ಚಂದ್ರನತ್ತ ಲೂನಾ -25 ಮಿಷನ್‌ ಕಳುಹಿಸಿದೆ. ಅದಕ್ಕಿಂತ ಎರಡು ದಿನಗಳ ಮೊದಲ ಚಂದ್ರನಲ್ಲಿ ನಮ್ಮ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಯಬಹುದು ಎಂದು ಇಸ್ರೋ ಹೇಳಿದೆ. ಚಂದ್ರಯಾನ -3 ಉಡಾವಣೆಯ ನಂತರ ರಷ್ಯಾದ ಲೂನಾ -25 ಮಿಷನ್‌ ಉಡಾವಣೆಯಾಗಿರುವುದು. ಜತೆಗೆ ಲ್ಯಾಂಡಿಂಗ್​​ ಪ್ರದೇಶದಲ್ಲೂ ಬದಲಾವಣೆ ಇದೆ ಎಂದು ಹೇಳಿದೆ. ಇದರಿಂದ ಎರಡು ಮಿಷನ್​​ ನಡುವೆ ಯಾವುದೇ ಘರ್ಷಣೆ ನಡೆಯುವ ಸಾಧ್ಯತೆ ಇಲ್ಲ ಎಂದು ಹೇಳಿದೆ.

- Advertisement -

Related news

error: Content is protected !!