Wednesday, July 2, 2025
spot_imgspot_img
spot_imgspot_img

ಶ್ರೀ ಕ್ಷೇ, ಧ, ಗ್ರಾ.ಯೋ.ಬಿ.ಸಿ.ಟ್ರಸ್ಟ್(ರಿ) ವಿಟ್ಲ ಅಳಿಕೆ ವಲಯ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಎರಂಬುಅಳಿಕೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಳಿಕೆ ವಲಯದ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಜ್ಞಾನವಿಕಾಸ ಕೆಂದ್ರ ಉದ್ಘಾಟನಾ ಕಾರ್ಯಕ್ರಮ

- Advertisement -
- Advertisement -
suvarna gold

ಶ್ರೀ ಕ್ಷೇ, ಧ, ಗ್ರಾ.ಯೋ.ಬಿ.ಸಿ.ಟ್ರಸ್ಟ್(ರಿ) ವಿಟ್ಲ ಅಳಿಕೆ ವಲಯ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಎರಂಬುಅಳಿಕೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಳಿಕೆ ವಲಯ ಜನಜಾಗ್ರತಿ ವೇದಿಕೆ ಅಳಿಕೆ ವಲಯ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಅಳಿಕೆ ವಲಯ ಇದರ ಸಂಯುಕ್ತ ಆಶ್ರಯದಲ್ಲಿ, ಜ.17ರ ಸೋಮವಾರದಂದು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಎರುಂಬು ಅಳಿಕೆ ಇಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಜ್ಞಾನವಿಕಾಸ ಕೆಂದ್ರ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಸಭಾಧ್ಯಕ್ಷತೆಯನ್ನು ಪ್ರಗತಿಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಇದರ ವಲಯಾಧ್ಯಕ್ಷರಾದ ಜನಾರ್ಧನ ಪದ್ಮಶಾಲಿಯವರು ವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್ (ರಿ)ಧರ್ಮಸ್ಥಳ ಇದರ ಮುಖ್ಯ ನಿರ್ವಹಣಾಧಿಕಾರಿಯಾದ(C.0.0) ಅನಿಲ್ ಕುಮಾರ್ ಉದ್ಘಾಟಿಸಿ ಪರಮಪೂಜ್ಯ ಹೆಗ್ಗಡೆಯವರು ಹಾಕಿಕೊಂಡ ಕಾರ್ಯಕ್ರಮ ಕೇವಲ ಪ್ರಗತಿನಿಧಿ ಸಾಲಕ್ಕಾಗಿ ಮಾತ್ರ ಸೀಮಿತವಾಗಿರದೆ ಒಬ್ಬ ಮನುಷ್ಯನ ಸರ್ವತೋಮುಖ ಅಭಿವೃದ್ಧಿಗಾಗಿ ಹಾಕಿಕೊಂಡ ಯೋಜನೆ ಇಂದು ಪ್ರಸ್ತುತ ಹೆಮ್ಮರವಾಗಿ ಬೆಳೆದು ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವುದು ಸಂತೋಷದ ವಿಚಾರ ಎಂದರು.

ಶ್ರೀಮತಿ ರೇಣುಕಾ ಕಣಿಯೂರುರವರು ತನ್ನ ಧಾರ್ಮಿಕ ಉಪನ್ಯಾಸದಲ್ಲಿ ಇಂದು ಮನುಷ್ಯ ಪ್ರಕೃತಿಯನ್ನು ಮರೆತು ಕೇವಲ ವಿಜ್ಞಾನದ ಹಿಂದೆ ಹೋಗುತ್ತಿದ್ದಾನೆ ಪ್ರಕೃತಿಯನ್ನು ಪೂಜಿಸಿ ಹಿರಿಯರು ಹಾಕಿಕೊಟ್ಟ ಆದರ್ಶ ಸಂಪ್ರದಾಯಗಳನ್ನು ಆಚರಿಸುವುದರ ಜೊತೆಗೆ ವಿಜ್ಞಾನವನ್ನು ಒಪ್ಪಿಕೊಳ್ಳಬೇಕೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಸರಸ್ವತಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಅಳಿಕೆ ಗ್ರಾಮ ಪಂಚಾಯತ್, ಪ್ರಗತಿಪರ ಕೃಷಿಕರಾದ ವೆಂಕಟಕೃಷ್ಣ ಶರ್ಮ ಮುಳಿಯ ಜನಜಾಗೃತಿ ವೇದಿಕೆ ಅಳಿಕೆ ಇದರ ವಲಯಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಕಾರಂತ ಎರಂಬು, ಶ್ರೀ ಕ್ಷೇ ಧ, ಗ್ರಾ. ಯೋ.ಬಿ.ಸಿ. ಟ್ರಸ್ಟ್ (ರಿ) ದ.ಕ.ಜಿಲ್ಲೆ – 2 ಪುತ್ತೂರು, ಇದರ ನಿರ್ದೇಶಕರಾದ ಶ್ರೀ ಪ್ರವೀಣ್ ಕುಮಾರ್, ಅಳಿಕೆ ಗ್ರಾಮ ಪಂಚಾಯತ್ ನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಶ್ರೀ ಜಿನ್ನಪ್ಪ ಗೌಡ, ಶ್ರೀ ವಿಷ್ಣುಮಂಗಲ ಸೇವಸಮಿತಿ, ಎರಂಬು ಇದರ ಅಧ್ಯಕ್ಷರಾದ ಶ್ರೀ ವಸಂತ ಕುಲಾಲ್ ರವರು ಉಪಸ್ಥಿತರಿದ್ದರು.

vtv vitla
vtv vitla

ಸೇವಾಪ್ರತಿನಿಧಿಯವರಾದ ಶ್ರೀಮತಿ ವಿನಯ ರೈ ಹಾಗೂ ಇತರ ಸೇವಪ್ರತಿನಿಧಿಯವರು ಉಪಸ್ಥಿತರಿದ್ದರು. ಸುಜ್ಞಾನ ನಿಧಿ ಶಿಷ್ಯ ವೇತನವನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಯಿತು, ವಿಟ್ಲ ತಾಲ್ಲೂಕಿನ ಯೋಜನಾಧಿಕಾರಿಯಾದ ಶ್ರೀ ಚೆನ್ನಪ್ಪ ಗೌಡರವರು ಸ್ವಾಗತಿಸಿದರು. ಅಳಿಕೆ ವಲಯದ ಮೇಲ್ವಿಚಾರಕರಾದ ರಮೇಶ್ ಎಸ್ ರವರು ವರದಿ ವಾಚಿಸಿದರು.

vtv vitla

ಜ್ಞಾನ ವಿಕಾಸ ಕೇಂದ್ರ ಸಮನ್ವಯಾಧಿಕಾರಿಯಾದ ಕುಮಾರಿ ಸವಿತಾರವರು ಕಾರ್ಯಕ್ರಮವನ್ನು ನಿರೂಪಿಸಿದರು, ವಿಟ್ಲ ವಲಯದ ಮೇಲ್ವಿಚಾರಕಿ ಶ್ರೀಮತಿ ವಿನೋದರವರು ವಂದಿಸಿದರು. ಈ ವೇಳೆ ಕಲ್ಪತರು ಜ್ಞಾನವಿಕಾಸ ಕೆಂದ್ರದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

- Advertisement -

Related news

error: Content is protected !!