Tuesday, May 21, 2024
spot_imgspot_img
spot_imgspot_img

ಸತತ 8ನೇ ಬಾರಿಗೆ ಜಯಗಳಿಸಿದ ಬಸವರಾಜ ಹೊರಟ್ಟಿ

- Advertisement -G L Acharya panikkar
- Advertisement -

ಸೋಲಿಲ್ಲದ ಸರದಾರ ಖ್ಯಾತಿಯ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸತತ ಎಂಟನೇ ಬಾರಿಗೆ ಜಯಭೇರಿ ಬಾರಿಸಿದ್ದಾರೆ.ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ ಮತ ಎಣಿಕೆ ಮಂಗಳವಾರ (ಜೂನ್‌ 15) ನಡೆದಿದ್ದು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ಎಂಟನೇ ಬಾರಿಗೆ ಗೆದ್ದು ವಿಜಯಮಾಲೆ ಧರಿಸಿದ್ದಾರೆ.

ಬಸವರಾಜ ಹೊರಟ್ಟಿಯವರು ಬಸವರಾಜ ಹೊರಟ್ಟಿ 9266 ಮತಗಳನ್ನು ಪಡೆದು ಐದೂವರೆ ಸಾವಿರಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲೇ ಗೆಲುವಿನ ನಗು ಬೀರಿದ್ದಾರೆ. ಆದರೆ ಬುದ್ಧಿವಂತರ ಕ್ಷೇತ್ರ ಎಂದು ಕರೆಯಲ್ಪಡುವ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ 1223 ಮತಗಳು ತಿರಸ್ಕಾರಗೊಂಡಿರುವುದು. ಒಟ್ಟು ಎಣಿಕೆಯಾದ 15583 ಮತಗಳಲ್ಲಿ 1223 ಮತಗಳು ತಿರಸ್ಕೃತಗೊಂಡಿವೆ. ಒಟ್ಟು ಸಿಂಧುತ್ವಗೊಂಡ 14360 ಮತಗಳಲ್ಲಿ ಬಸವರಾಜ ಹೊರಟ್ಟಿ 9266 ಮತಗಳನ್ನು ಪಡೆದಿದ್ದಾರೆ.

ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ ಬೆಂಬಲಿತ ಬಸವರಾಜ ಗುರಿಕಾರ -4597, ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶ್ರೀಶೈಲ ಗುಡದಿನ್ನಿ 273 ಮತ ಪಡೆದುಕೊಂಡಿದ್ದಾರೆ.ಚಲಾವಣೆಯಅದ ಮತಗಳ ಪೈಕಿ ಶೇ.60ಕ್ಕಿಂತ ಹೆಚ್ಚು ಮತಗಳನ್ನು ಬಸವರಾಜ ಹೊರಟ್ಟಿಯವರು ಪಡೆದಿದ್ದಾರೆ.ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ಗೆದ್ದ ಹಿನ್ನೆಲೆಯಲ್ಲಿ ಬಸವರಾಜ್ ಹೊರಟ್ಟಿ ಅಭಿಮಾನಿಗಳಿಂದ ವಿಜಯೋತ್ಸವ ನಡೆಸಲಾಗುತ್ತಿದೆ. ಮತ ಎಣಿಕೆ ಕೇಂದ್ರದ ಹೊರಗಡೆ ಹಾಗೂ ವಿವಿಧೆಡೆ ಬಸವರಾಜ ಹೊರಟ್ಟಿ ಅವರ ಭಾವಚಿತ್ರ ಹಿಡಿದು, ಅವರ ಪರ ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದಾರೆ.

ವಿಧಾನ ಪರಿಷತ್ ಚುನಾವಣೆ ಫಲಿತಾಂಶ; 4 ಸ್ಥಾನ, 49 ಅಭ್ಯರ್ಥಿಗಳು

- Advertisement -

Related news

error: Content is protected !!