Friday, May 3, 2024
spot_imgspot_img
spot_imgspot_img

ಸದ್ಗುಣಗಳ ನಿಧಿ ದಾಸವಾಳ ಹೂವು: ಆರೋಗ್ಯಕ್ಕೂ ಇದೆ ಅದ್ಭುತ ಲಾಭ.!

- Advertisement -G L Acharya panikkar
- Advertisement -

ದಾಸವಾಳ ದೇವರ ಪೂಜೆಗೆ ಅತ್ಯಂತ ಶ್ರೇಷ್ಠವಾದ ಹೂವು. ಇದು ತನ್ನ ಸೌಂದರ್ಯಕ್ಕಿಂತ ಹೆಚ್ಚು ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ. ದಾಸವಾಳವನ್ನು ಬಳಸುವುದರಿಂದ ಅನೇಕ ರೋಗಗಳನ್ನು ಗುಣಪಡಿಸಬಹುದು. ದಾಸವಾಳ ಎಂಟಿಒಕ್ಸಿಡೆಂಟ್‌ಗಳನ್ನು ಹೊಂದಿದೆ. ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಆಂಥೋಸಯಾನಿನ್‌ಗಳು ಮತ್ತು ಪ್ಲೇವನಾಯ್ಡ್ಗಳಂತಹ ಅಗತ್ಯ ಸಂಯುಕ್ತಗಳು ಇದರಲ್ಲಿವೆ.

ದಾಸವಾಳ ಹೂವಿನಲ್ಲಿ ಕಬ್ಬಿಣಾಂಶ ಯಥೇಚ್ಛವಾಗಿ ಕಂಡುಬರುತ್ತದೆ. ರಕ್ತಹೀನತೆಯಿಂದ ಬಳಲುತ್ತಿರುವವರು ದಾಸವಾಳದ ಹೂವನ್ನು ಬಳಸಬೇಕು. ಅದರ ಮೊಗ್ಗುಗಳನ್ನು ಜಜ್ಜಿ ರಸವನ್ನು ತೆಗೆದು ನಿಯಮಿತವಾಗಿ ಸೇವಿಸಬೇಕು.

ದಾಸವಾಳದ ಹೂವು ತೂಕ ಇಳಿಸಲು ಸಹ ಸಹಕಾರಿಯಾಗಿದೆ. ಇದು ಹಸಿವನ್ನು ಕಡಿಮೆ ಮಾಡುತ್ತದೆ. ದಾಸವಾಳದ ಎಲೆಗಳಿಂದ ಕಷಾಯ ಮಾಡಿ ಕುಡಿಯಬಹುದು. ಇದು ನಿಮಗೆ ಶಕ್ತಿಯನ್ನು ನೀಡುತ್ತದೆ ಮತ್ತು ದೀರ್ಘಕಾಲ ಹಸಿವನ್ನು ಅನುಭವಿಸುವುದಿಲ್ಲ.

ದಾಸವಾಳ ಹೂವು ತುರಿಕೆ ಹಾಗೂ ಊತದ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ದಾಸವಾಳದ ಹೂವಿನ ಎಸಳುಗಳನ್ನು ಜಜ್ಜಿ ಊದಿಕೊಂಡ ಭಾಗಕ್ಕೆ ಹಚ್ಚಬೇಕು. ತುರಿಕೆ ಇದ್ದಲ್ಲಿ ಅದು ಕೂಡ ನಿವಾರಣೆಯಾಗುತ್ತದೆ.

ದಾಸವಾಳದ ಹೂವಿನ ಕಷಾಯ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದು ಅಪಧಮನಿಗಳಲ್ಲಿ ಪ್ಲೇಕ್ ಘನೀಕರಿಸುವುದನ್ನು ತಡೆಯುತ್ತದೆ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಂಡುಬರುತ್ತವೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಗುಣಲಕ್ಷಣಗಳು ಕಂಡುಬರುತ್ತವೆ. ಹಾಗೂ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ. ಇದರ ಹೂಗಳನ್ನು ಬಿಸಿನೀರಿನಲ್ಲಿ ಕುದಿಸಿ ಕುಡಿಯುವುದು ಪ್ರಯೋಜನಕಾರಿ.

ದಾಸವಾಳವು ಮಹಿಳೆಯರಲ್ಲಿ ಮುಟ್ಟಿನ ಅನಿಯಮಿತತೆಯನ್ನು ಹೋಗಲಾಡಿಸಲು ಸಹ ಬಹಳ ಸಹಾಯಕವಾಗಿದೆ. ಇದು ದೇಹದಲ್ಲಿ ಈಸ್ಟೋಜೆನ್ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿಡುತ್ತದೆ. ಒಂದು ವೇಳೆ ದೇಹದಲ್ಲಿ ಈಸ್ಟೋಜೆನ್ ಮಟ್ಟವು ಕಡಿಮೆಯಾದರೆ ಹಾರ್ಮೋನುಗಳು ಹದಗೆಡಲು ಪ್ರಾರಂಭಿಸುತ್ತವೆ.

ದಾಸವಾಳ ಹೂವಿನ ಎಸಳುಗಳನ್ನು ಜಗಿದು ತಿನ್ನಬಹುದು ಅಥವಾ ನೀರಿನಲ್ಲಿ ಕುದಿಸಿ ಕುಡಿದರೆ ಬಾಯಿ ಹುಣ್ಣಿನಿಂದ ಉಪಶಮನ ದೊರೆಯುತ್ತದೆ. ಬಾಯಿಯಲ್ಲಿ ಬಹಳಷ್ಟು ಲಾಲಾರಸವು ಉತ್ಪತ್ತಿಯಾಗಿ, ಬಾಯಿ ಹುಣ್ಣುಗಳಿಗೆ ಪರಿಹಾರ ನೀಡುತ್ತದೆ. ದಾಸವಾಳದ ಹೂವು ಹೃದಯಕ್ಕೆ ಒಳ್ಳೆಯದು. ಮೂಲವ್ಯಾಧಿ ನಿದ್ರಾಹೀನತೆ, ಯುಟಿಐ, ಮೆನೊರ್ಹೇಜಿಯಾದಂತಹ ರಕ್ತಸ್ರಾವದ ಅಸ್ವಸ್ಥತೆಗಳಿಗೆ ಇದರಲ್ಲಿ ಪರಿಹಾರವಿದೆ. ಅಷ್ಟೇ ಅಲ್ಲ ದಾಸವಾಳದ ಹೂವುಗಳಿಂದ ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ಸಹ ಪರಿಹರಿಸಬಹುದು.

- Advertisement -

Related news

error: Content is protected !!