Monday, April 29, 2024
spot_imgspot_img
spot_imgspot_img

ಬಂಟ್ವಾಳ: ಸಂತ ಲಾರೆನ್ಸ್ ದೇವಾಲಯ ವಿಜಯಡ್ಕದಲ್ಲಿ ನೇಜಿ ನೆಡುವ ಕಾರ್ಯಕ್ರಮ

- Advertisement -G L Acharya panikkar
- Advertisement -

ಬಂಟ್ಟಾಳ: ಕರೋಪಾಡಿ ಗ್ರಾಮದ, ಸಂತ ಲಾರೆನ್ಸ್ ದೇವಾಲಯ ವಿಜಯಡ್ಕ ಇಲ್ಲಿ 2 ಎಕರೆ ಕೃಷಿ ಭೂಮಿಯಲ್ಲಿ ಪ್ರತಿ ವರ್ಷದಂತೆ ೧೧ ನೇ ವರ್ಷದ ನೇಜಿ ನೆಡುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಚರ್ಚ್ನ ಧರ್ಮಗುರು ಫಾ. ಎಡ್ವಿನ್ ಸಂತೋಷ್ ಮೊನಿಸ್ ಇವರ ನೇತೃತ್ವದಲ್ಲಿ ನಡೆದ ಈ ಕೆಲಸದ ಕಾರ್ಯದಲ್ಲಿ ಚರ್ಚ್‌‌ನ 100 ಜನರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಸೇವೆಯ ಕೆಲಸವನ್ನು ಸಂಭ್ರಮಿಸಿಕೊಂಡರು.

ಚರ್ಚ್‌‌ನ ಧರ್ಮಗುರುಗಳು ನೇಜಿ ನೆಡುವ ಮೂಲಕ ಕೃಷಿಯಲ್ಲಿನ ಆಸಕ್ತಿಯನ್ನು ವ್ಯಕ್ತಪಡಿಸಿದರು. ನೇಜಿ ನೆಡುವ ಕಾರ್ಯಕ್ರಮದ ನಂತರ ಕಥೊಲಿಕ್ ಸಭಾ ವಿಜಯಡ್ಕ ಘಟಕದ ವತಿಯಿಂದ ‘ ಪರಿಸರ ದಿನ ’ ವನ್ನು ಆಚರಿಸಲಾಯಿತು.

ಕಥೊಲಿಕ್ ಸಭಾ ಅಧ್ಯಕ್ಷ ಜೀವನ್ ಪ್ರಕಾಶ್ ಡಿಸೋಜ, ಇವರು ಅಥಿತಿಗಳಾದ ಫಾ. ಎಡ್ವಿನ್ ಮೊನಿಸ್ (ಧರ್ಮಗುರುಗಳು) ಮತು ಪಾಲನಾ ಮಂಡಳಿಯ ಉಪಾಧ್ಯಕ್ಷ ತೋಮಸ್ ಫೆರಾವೊ ಇವರಿಗೆ ಸ್ವಾಗತಿಸಿದರು. ಗಿಡ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. ಚರ್ಚ್‌‌ನ ಪ್ರತೀ ಕುಟುಂಬಗಳಿಗೆ ಒಂದರಂತೆ ಗಿಡವನ್ನು ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಕಥೊಲಿಕ್ ಸಭೆಯ ಉಪಾಧ್ಯಕ್ಷರಾದ ತೋಮಸ್ ಫೆರಾವೂ ಇವರು ನಿರೂಪಿಸಿದರು.

ನೇಜಿ ನೆಡುವ ಕಾರ್ಯಕ್ರಮಕ್ಕೆ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ತೋಮಸ್ ಫೆರಾವೊ, ಕಾರ್ಯದರ್ಶಿ ರೋಜಿನಾ ವೇಗಸ್, ಕಥೊಲಿಕ್ ಸಭೆಯ ಅಧ್ಯಕ್ಷ ಜೀವನ್ ಪ್ರಕಾಶ್ ಡಿಸೋಜ, ಸಂತ ಲಾರೆನ್ಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ, ಸಿಸ್ಟರ್ ಫೆಲ್ಸಿಯಾನ ಮೋರಸ್, ವಿನ್ಸೆಂಟ್ ಪೌಲ್ ಸಭೆಯ ಅಧ್ಯಕ್ಷ – ಲಿಯೋ ಡಿಸೋಜ, ಉಪಸ್ಥಿತರಿದ್ದು, ಕೆಲಸದಲ್ಲಿ ತೊಡಗಿದರು. 2 ಎಕರೆಯಲ್ಲಿ ನೇಜಿ ನೆಡುವ ಕಾರ್ಯ ಕೇವಲ ನಾಲ್ಕುವರೆ ಗಂಟೆಯಲ್ಲಿ ಮುಗಿಸಿ ಊಟದ ಮೂಲಕ ಕಾರ್ಯಕ್ರಮಕ್ಕೆ ವಿರಾಮ ಹಾಕಲಾಯಿತು.

- Advertisement -

Related news

error: Content is protected !!