Tuesday, June 23, 2026
spot_imgspot_img
spot_imgspot_img

ಸದ್ದಿಲ್ಲದೇ ನಡೆಯಿತಾ ಕಿರುತೆರೆ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್..? ನಿಶ್ವಿತಾರ್ಥದ ಫೋಟೋ ವೈರಲ್

- Advertisement -
- Advertisement -

ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ನಿಶ್ಚಿತಾರ್ಥದ ಫೋಟೋ ವೈರಲ್ ಆಗಿದೆ, ವೈಷ್ಣವಿ ಗೌಡ ಹಾಗೂ ಹುಡುಗನೊಬ್ಬ ಹೂ ಮಾಲೆ ಧರಿಸಿ ನಿಂತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸ್ಪರ್ಧಿ ವೈಷ್ಣವಿ ಗೌಡ ನಿಶ್ಚಿತಾರ್ಥದ ಫೋಟೋ ವೈರಲ್ ಆಗಿದೆ, ವೈಷ್ಣವಿ ಗೌಡ ವಿದ್ಯಾ ಭರಣ್ ಎನ್ನುವವರ ಜೊತೆ ಹಸೆಮಣೆ ಏರಲಿದ್ದಾರೆ. ವಿದ್ಯಾ ಭರಣ್ ಮತ್ತು ವೈಷ್ಣವಿ ಇಬ್ಬರೂ ಮಾಲೆ ಹಾಕಿಕೊಂಡು ನಿಂತಿರುವ ಫೋಟೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ. ವೈಷ್ಣವಿ ಮತ್ತು ವಿದ್ಯಾ ಭರಣ್ ಜೋಡಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸದ್ಯ ವೈರಲ್ ಆಗಿರುವ ವೈಷ್ಣವಿ ಎಂಗೇಜ್‌ಮೆಂಟ್ ಫೋಟೋದಲ್ಲಿ ಶಂಕರ್ ಬಿದಿರಿ ಕೂಡ ಇದ್ದಾರೆ.

ವೈಷ್ಣವಿ ಹಸೆಮಣೆ ಏರುತ್ತಿರುವ ಹುಡುಗ ವಿದ್ಯಾ ಭರಣ್. ಈಗಾಗಲೇ ಒಂದು ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ೨೦೧೮ರಲ್ಲಿ ರಿಲೀಸ್ ಆಗಿದ್ದ ವಿರಾಜ್ ಎನ್ನುವ ಸಿನಿಮಾದಲ್ಲಿ ವಿದ್ಯಾ ಭರಣ್ ನಟಿಸಿದ್ದರು. ಬೆಂಗಳೂರೂ ಮೂಲದ ಹುಡುಗ ವಿದ್ಯಾ ಭರಣ್ ಬಿಎಮ್‌ಎಸ್ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಇದೀಗ ವೈಷ್ಣವಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಬಿಗ್ ಬಾಸ್‌ಗೆ ಬಂದಾಗ ವೈಷ್ಣವಿ ಗೌಡ ಅವರು ಮದುವೆ ಬಗ್ಗೆ ಸಾಕಷ್ಟು ಮಾತನಾಡಿದ್ದರು. ತಮಗೆ ಮದುವೆ ಆಗಬೇಕು ಎನ್ನುವ ಆಸೆ ಇದೆ ಎಂದು ಅನೇಕ ಬಾರಿ ಹೇಳಿಕೊಂಡಿದ್ದರು. ಈ ಕಾರಣಕ್ಕೆ ಬಿಗ್ ಬಾಸ್‌ನಿಂದ ಹೊರ ಬಂದ ನಂತರದಲ್ಲಿ ಮದುವೆ ಆಫರ್‌ಗಳು ಬರೋಕೆ ಆರಂಭ ಆಗಿದ್ದವು. ಈ ಬಗ್ಗೆ ಅವರು ಲೈವ್‌ನಲ್ಲಿ ಹೇಳಿಕೊಂಡಿದ್ದೂ ಇದೆ.

ಕನ್ನಡ ಬಿಗ್ ಬಾಸ್ ಸೀಸನ್ 8 ಪೂರ್ಣಗೊಂಡು ಒಂದು ವರ್ಷದ ಬಳಿಕ ಅವರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ ಸಾಕಷ್ಟು ಫೇಮಸ್ ಆದವರು ನಟಿ ವೈಷ್ಣವಿ ಗೌಡ. ಅವರಿಗೆ ಈ ಧಾರಾವಾಹಿ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.

- Advertisement -

Related news

error: Content is protected !!