Sunday, May 12, 2024
spot_imgspot_img
spot_imgspot_img

ಸವಣೂರು: ಶಾಲೆಯಲ್ಲೇ ನಮಾಜ್ ಮಾಡಿದ ವಿದ್ಯಾರ್ಥಿಗಳ ವಿಡಿಯೋ ವೈರಲ್.!

- Advertisement -G L Acharya panikkar
- Advertisement -

ಸವಣೂರು: ಹಿಜಾಬ್ ವಿವಾದದ ಮಧ್ಯೆ ವಿದ್ಯಾರ್ಥಿಗಳು ತರಗತಿಯ ಒಳಗಡೆ ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸವಣೂರು ಗ್ರಾ.ಪಂ ವ್ಯಾಪ್ತಿಯ ಅಂಕತಡ್ಕ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಇನ್ನು ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುವ ಬಗ್ಗೆ ಸ್ಥಳೀಯರಿಂದ ಈ ಹಿಂದೆ ಕೂಡ ವಿರೋಧ ವ್ಯಕ್ತವಾಗಿದ್ದು, ಹೀಗಾಗಿ ಈ ವಿಚಾರ ಶಾಲಾ ಮುಖ್ಯಸ್ಥರ ಗಮನಕ್ಕೂ ತರಲಾಗಿದೆ ಎಂದು ತಿಳಿದುಬಂದಿದೆ.

ಪ್ರತಿ ಶುಕ್ರವಾರ ಮಕ್ಕಳನ್ನು ಮಸೀದಿಗೆ ಕಳುಹಿಸಿಕೊಡುವಂತೆ ಹೆತ್ತರವರು ಪೋಷಕರ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಹೀಗಾಗಿ ಶಿಕ್ಷಕರು ಮಕ್ಕಳನ್ನು ಹೆತ್ತವರು ಕರೆದುಕೊಂಡು ಹೋಗಿ ವಾಪಾಸು ಶಾಲೆಗೆ ಬಿಡುವಂತೆ ತಿಳಿಸಿದ್ದರು ಎನ್ನಲಾಗಿದೆ. ಆದರೆ ಮಕ್ಕಳ ಹೆತ್ತವರು ಕರೆದುಕೊಂಡು ಹೋಗಲು ಬಾರದ ಹಿನ್ನೆಲೆಯಲ್ಲಿ ಶುಕ್ರವಾರದಂದು ಶಾಲೆಯ ಕೊಠಡಿಯೊಂದರಲ್ಲಿಯೇ ನಮಾಝ್ ಮಾಡಿದ್ದು.ಆ ವಿಡಿಯೋ ವೈರಲ್ ಆಗ್ತಾ ಇದೆ.

ಸದ್ಯ ಘಟನೆ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ರವಾನೆಯಾಗಿದ್ದು ಶಾಲೆಯತ್ತ ಅಧಿಕಾರಿಗಳು ದೌಡಾಯಿಸಿದ್ದು, ಬೆಳ್ಳಾರೆ ಪೊಲೀಸರು ಭೇಟಿ ನೀಡಿರುವುದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!