- Advertisement -
- Advertisement -
ಮಂಗಳೂರು: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.

ದಿನಾಂಕ 8 ರಿಂದ 10 ರವರೆಗೆ ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿದ್ದು, ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆ ಮುಂದೂಡಿದ ಪರೀಕ್ಷೆಗಳ ಪರಿಷ್ಕೃತ ದಿನಾಂಕ ಶೀಘ್ರದಲ್ಲೇ ಪ್ರಕಟವಾಗಲಿದೆ.

ಪರೀಕ್ಷೆ ಮುಂದೂಡಿರುವುದಾಗಿ ಮಂಗಳೂರು ವಿ.ವಿ ಕುಲಸಚಿವ ಪ್ರೋ ಪಿ.ಎಸ್ ಯಡಪಡಿತ್ತಾಯರವರು ಆದೇಶ ಹೊರಡಿಸಿದ್ದಾರೆ.


- Advertisement -