Monday, October 5, 2026
spot_imgspot_img
spot_imgspot_img

ಸಿದ್ದರಾಮಯ್ಯನವರದ್ದೇ ತಾಲಿಬಾನಿ ಸಂಸ್ಕೃತಿ; ಸಿದ್ದು ಸಿಎಂ ಆಗಿದ್ದಾಗ ದ.ಕ ಜಿಲ್ಲೆಯಲ್ಲಿ 24ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು.! – ನಳಿನ್ ಕುಮಾರ್ ಗರಂ

- Advertisement -
- Advertisement -

ಮಂಗಳೂರಿನಲ್ಲಿರುವುದು ತಾಲಿಬಾನಿ ಆಡಳಿತವೇ? ಹಾಗೂ ತಾಲಿಬಾನಿ ಸಂಸ್ಕೃತಿಯ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿರುವ ಸರಣಿ ಟ್ವೀಟ್‌ಗಳಿಗೆ ಎಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ. ಮಂಗಳೂರಿನಲ್ಲಿ ಇಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ವಿಪಕ್ಷ ನಾಯಕ ಸಿದ್ದರಾಮಯ್ಯನವರೇ ತಾಲಿಬಾನ್ ಸಂಸ್ಕೃತಿ ಹೊಂದಿದವರು, ಅವರು ದೊಡ್ಡ ಭಯೋತ್ಪಾದಕ ಅನಿಸುತ್ತಿದೆ ಎಂದು ಟೀಕಿಸಿದ್ದಾರೆ.

ಸಿದ್ದು ಸಿಎಂ ಆಗಿದ್ದಾಗ 24ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು..! – ಕಟೀಲ್

ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗಲೇ 24ಕ್ಕೂ ಹೆಚ್ಚು ಹಿಂದೂಗಳ ಹತ್ಯೆಯಾಗಿತ್ತು, ಅವರ ಆಳ್ವಿಕೆ ಕಾಲದಲ್ಲಿಯೇ, ಕಾಂಗ್ರೆಸ್ ಆಡಳಿತದಲ್ಲಿಯೇ ರಾಜ್ಯದಲ್ಲಿ ಹೆಚ್ಚು ಕೊಲೆ, ಸುಲಿಗೆ, ಮರಣ, ನಿತ್ಯ ಗೋಹತ್ಯೆ ನಡೆಯುತ್ತಿದೆ ಎಂದು ಖಂಡಿಸಿದ್ದಾರೆ. ಕಾಂಗ್ರೆಸ್ ಇವತ್ತು ಅತಂತ್ರ ಸ್ಥಿತಿಯಲ್ಲಿದೆ. ಅವರಿಗೆ ಅತಂತ್ರ ಸ್ಥಿತಿ ಬಂದಾಗ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ದಕ್ಷಿಣ ಕನ್ನಡದಲ್ಲಿ ಶರತ್ ಮಡಿವಾಳ, ದೀಪಕ್ ರಾವ್ , ಪ್ರತಾಪ್ ಪೂಜಾರಿ ಹೀಗೆ ಹಲವು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಸುಳ್ಯದಲ್ಲಿ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಕೊಲ್ಲಲಾಗಿದೆ. ಎಟಿಎಂ ಒಳಗೆ ಹೋದ ಮಹಿಳೆ ಮೇಲೆ ಹಲ್ಲೆಯಾಗಿದೆ, ಇದಕ್ಕೆ ನಾನು ಹೇಳಿದ್ದು ಅವರದ್ದೇ ತಾಲಿಬಾನ್ ಸಂಸ್ಕೃತಿ ಎಂದು ಟೀಕಿಸಿದರು.

ಕಾಂಗ್ರೆಸ್‌ನ ಹಲವು ನಾಯಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ..?!

ಇನ್ನು ಕಾಂಗ್ರೆಸ್‌ನ ಅತಂತ್ರ ಸ್ಥಿತಿ ವಿವರಿಸುವ ವೇಳೆ ಕಾಂಗ್ರೆಸ್‌ನ ಹಲವು ನಾಯಕರು ಇಂದು ಬಿಜೆಪಿಗೆ ಸೇರಲು ಸಿದ್ಧರಾಗಿದ್ದಾರೆ. ಅಂತಹ ಉತ್ತಮ ಪಕ್ಷ ನಮ್ಮದು. ಕಾಂಗ್ರೆಸ್ ಪಕ್ಷದಲ್ಲಿ ನಾಯಕರಿಗೆ ನಂಬಿಕೆ ಇಲ್ಲ. ಇದರಿಂದ ಹತ್ತಾರು ನಾಯಕರು ಇಂದು ಭಾರತೀಯ ಜನತಾ ಪಾರ್ಟಿಗೆ ಸೇರಲು ಸಿದ್ಧರಾಗಿದ್ದಾರೆ. ನನ್ನ ಬಳಿ ಹಲವು ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿದ್ದಾರೆ ಎಂಬ ಸ್ಪೋಟಕ ಅಂಶವನ್ನು ಬಹಿರಂಗಪಡಿಸಿದ್ದಾರೆ.

- Advertisement -

Related news

error: Content is protected !!