- Advertisement -
- Advertisement -


ಬೀದರ್: ಚಿಕ್ಕಬಳ್ಳಾಪುರದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಬೀದರ್ನ ಭಾಲ್ಕಿಯಲ್ಲೂ ಶಂಕಿತನನ್ನು ಬಂಧಿಸಲಾಗಿದೆ. ಏಣಕೂರು ಗ್ರಾಮದ ವಿಶಾಲಕುಮಾರ್ ಮೇತ್ರೆಯನ್ನು ಭಾಲ್ಕಿ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.
ಪಾಕ್ ಮೂಲದ ನಿಷೇಧಿತ ಸಂಘಟನೆ ಜೊತೆ ವಾಟ್ಸಾಪ್ ಲಿಂಕ್ ಪತ್ತೆಯಾದ ಹಿನ್ನೆಲೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಆರೋಪಿ ಮೊಬೈಲ್ ಪರಿಶೀಲಿಸಿದಾಗ ಸ್ಫೋಟಕ ಅಂಶ ಬಯಲಾಗಿದೆ. ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಕಳೆದ 2 ದಿನಗಳ ಹಿಂದೆ ಮನೆಗೆ ಬಂದ ಪೊಲೀಸರು ಪರಿಶೀಲನೆ ಮಾಡಿ, ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕರ ಜೊತೆ ನನ್ನ ಮಗನಿಗೆ ನಂಟು ಇದೆ ಎಂಬುದು ಬರೀ ಸುಳ್ಳು ಅರೋಪ. ಆಸ್ತಿ ವಿಚಾರಕ್ಕೆ ತಂದೆ-ತಾಯಿ ನಡುವೆ ಜಗಳ ಇದೆ. ಬೇಕಂತಲೇ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದು ತಾಯಿ ಕಣ್ಣೀರು ಹಾಕಿದ್ದಾರೆ ಎಂದು ತಿಳಿದು ಬಂದಿದೆ.
- Advertisement -








