Friday, May 10, 2024
spot_imgspot_img
spot_imgspot_img

ಹೊಸ ವರ್ಷ ಆಚರಣೆಗೆ ಶೇಖರಿಸಿದ್ದ 1 ಕೋಟಿ ಮೌಲ್ಯದ ಡ್ರಗ್ಸ್ ವಶ!!

- Advertisement -G L Acharya panikkar
- Advertisement -

ಬೆಂಗಳೂರು: ಹೊಸ ವರ್ಷಾಚರಣೆಗೆ ಶೇಖರಿಸಿಟ್ಟಿದ್ದ ಒಂದು ಕೋಟಿ 15 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿದ್ದಾರೆ.

ಅಮೃತಹಳ್ಳಿಯಲ್ಲಿ ಇರುವ ಮನೆಯೊಂದರಲ್ಲಿ ಇದನ್ನು ಬಚ್ಚಿಡಲಾಗಿತ್ತು. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ತಿರುಪಾಲ್, ಕಮಲೇಶ್, ಸತೀಶ್ ಕುಮಾರ್ ಮತ್ತು ಎಜಾಜ್ ಪಾಷಾ ಎಂದು ಗುರುತಿಸಲಾಗಿದೆ.

ವಶಪಡಿಸಿಕೊಳ್ಳಲಾದ ವಸ್ತುಗಳಲ್ಲಿ 5 ಕಿಲೋ ಹ್ಯಾಶ್ ಆಯಿಲ್ ಕೂಡ ಸೇರಿದೆ. ಆರೋಪಿಗಳ ಕಾರು ಮತ್ತು ಬೈಕ್ ಗಳನ್ನು ಕೂಡ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಹೊಸ ವರ್ಷಾಚರಣೆ ವೇಳೆ ಬೆಂಗಳೂರು ಮತ್ತು ಇತರ ಹೋಟೆಲ್ ಗಳಿಗೆ ಇದನ್ನು ಪೂರೈಸಲು ಆರೋಪಿಗಳು ಸಂಚು ಹೂಡಿದ್ದರು ಎಂದು ವರದಿಯಾಗಿದೆ.

- Advertisement -

Related news

error: Content is protected !!