Wednesday, May 15, 2024
spot_imgspot_img
spot_imgspot_img

ಸುಬ್ರಹ್ಮಣ್ಯ: ನೈತಿಕ ಪೊಲೀಸ್ ಗಿರಿ ಪ್ರಕರಣ: ಪೊಲೀಸರ ತಾರತಮ್ಯ ಖಂಡಿಸಿ ಹಿಂದೂ ಸಂಘಟನೆಯಿಂದ ಇಂದು ಪ್ರತಿಭಟನೆಗೆ ಕರೆ

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಇಂದು ಸುಬ್ರಹ್ಮಣ್ಯ ಪೊಲೀಸ್‌ ಠಾಣೆ ಎದುರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದಾರೆ.

ದೇವಸ್ಥಾನದಂತಹ ಪವಿತ್ರ ಕ್ಷೇತ್ರದಲ್ಲಿ ಮಾರುವೇಷದಲ್ಲಿ ಬಂದು ಅಕ್ರಮ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ, ಆದರೂ ಪೋಲಿಸ್ ಇಲಾಖೆ ಇದನ್ನು ಹತ್ತಿಕ್ಕಲು ವಿಫಲವಾಗಿದೆ ಎಂದು ಇಲಾಖೆಯ ವಿರುದ್ದ ಹಿಂದೂ ಸಂಘಟನೆಗಳು ಆರೋಪಿಸಿವೆ.

ಹಿಂದೂ ಅಪ್ರಾಪ್ತ ಬಾಲಕಿಯನ್ನು ಭೇಟಿಯಾಗಲು ಸುಬ್ರಹ್ಮಣ್ಯಕ್ಕೆ ಬಂದ ಮುಸ್ಲಿಂ ಹುಡುಗನಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇತ್ತಂಡಗಳಿಂದ ದೂರು ಸಲ್ಲಿಕೆಯಾಗಿದ್ದು ಪ್ರಕರಣ ದಾಖಲಾಗಿದೆ.

READ THIS TOO: ?? ಸುಬ್ರಹಣ್ಯ: ಮುಸ್ಲಿಂ ಯುವಕನಿಗೆ ಥಳಿಸಿದ ಪ್ರಕರಣ; ಎರಡು ದೂರು ದಾಖಲು..! ದೂರಿನಲ್ಲಿ ಏನೇನಿದೆ..? ? 10ಕ್ಕೂ ಅಧಿಕ ಮಂದಿ ಕೂಡಿ ಹಾಕಿ ಹಲ್ಲೆಗೈದರು..!? ವಿದ್ಯಾರ್ಥಿನಿಯನ್ನು ಪ್ರೀತಿಸುವಂತೆ ಒತ್ತಡ ಹಾಕಿ ಮಾನಭಂಗಕ್ಕೆ ಯತ್ನ..!?

ಹಲ್ಲೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತಿರುವ ಪೋಲಿಸ್ ಅಧಿಕಾರಿಗಳು, ಮಾನ ಭಂಗಕ್ಕೆ ಯತ್ನಿಸಿದ್ದಾನೆ ಎನ್ನಲಾದ ಯುವಕನ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಪೋಲಿಸರು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ದಿಢೀರ್ ಪ್ರತಿಭಟನೆಗೆ ಸಿದ್ದತೆ ನಡೆಸಿದ್ದಾರೆ. ಬೆಳಗ್ಗೆ 10.30ಕ್ಕೆ ಪ್ರತಿಭಟನೆ ಆರಂಭವಾಗಲಿದೆ ಎಂದು ಹಿಂದೂ ಸಂಘಟನೆಗಳು ತಿಳಿಸಿವೆ. ಈ ಮದ್ಯೆ ರಾತ್ರಿ11 ರ ವೇಳೆ ಸುಬ್ರಹ್ಮಣ್ಯ ಠಾಣೆಗೆ ಬೇಟಿ ನೀಡಿದ ಡಿ ವೈ ಎಸ್ ಪಿ ಬೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

- Advertisement -

Related news

error: Content is protected !!