Sunday, June 21, 2026
spot_imgspot_img
spot_imgspot_img

ಸುಬ್ರಹ್ಮಣ್ಯ: Instagram ಮೂಲಕ ಪರಿಚಯ; ಅನ್ಯಕೋಮಿನ ಯುವಕನ್ನು ಭೇಟಿ ಮಾಡಲು ಬಂದ ಹಿಂದೂ ಯುವತಿ- ಥಳಿಸಿದ ಸಾರ್ವಜನಿಕರು

- Advertisement -
- Advertisement -
vtv vitla

ಸುಬ್ರಹ್ಮಣ್ಯ : ಇನ್‌ಸ್ಟಾಗ್ರಾಂನಲ್ಲಿ ಪರಿಚಯಗೊಂಡ ಹಿಂದೂ ಯುವತಿಯನ್ನ ಅನ್ಯಕೋಮಿನ ಯುವಕನೊಬ್ಬ ಭೇಟಿಯಾಗಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಳಕಿಗೆ ಬಂದಿದೆ.

ಇನ್ ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಕಲ್ಲುಗುಂಡಿಯ ಅನ್ಯಕೋಮಿನ ಯುವಕ ಮತ್ತು ಸುಬ್ರಹ್ಮಣ್ಯದ ಹಿಂದೂ ಯುವತಿ ಹಲವು ದಿನಗಳ ಕಾಲ ಫೋನ್‌ ಮೂಲಕ ಮಾತನಾಡಿದ್ದು, ಭೇಟಿಯಾಗೋದಕ್ಕೆ ಪ್ಲ್ಯಾನ್‌ ಮಾಡಿ ಸುಬ್ರಹ್ಮಣ್ಯ ಬಸ್ ಸ್ಟ್ಯಾಂಡ್ ನಲ್ಲಿ ಭೇಟಿಯಾಗಿದ್ದಾರೆ.

ಈ ವಿಚಾರ ತಿಳಿದು ಕುಮಾರಧಾರ ಬಳಿ ಗುಂಪೊಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ, ಹಲ್ಲೆ ನಡೆಸಿದ್ದಾರೆ. ಯುವಕನ ತಲೆ ಗಂಭೀರ ಗಾಯಗೊಂಡಿದ್ದು, ಸುಳ್ಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!