Sunday, June 14, 2026
spot_imgspot_img
spot_imgspot_img

ಸುರತ್ಕಲ್‌ ಜಂಕ್ಷನ್‌ನಲ್ಲಿ ವಾಹನ ಸಂಚಾರ ನಿಷೇಧ; ವಾಹನ ಸವಾರರ ಪರದಾಟ

- Advertisement -
- Advertisement -
vtv vitla

ಮಂಗಳೂರು: ಶನಿವಾರದಂದು ರಾತ್ರಿ ಕಾಟಿಪಳ್ಳದಲ್ಲಿ ಜಲೀಲ್‌ ಹತ್ಯೆ ಪ್ರಕರಣ ನಂತರ ಸುರತ್ಕಲ್ ಜಂಕ್ಷನ್‌ನಲ್ಲಿ ಪೊಲೀಸರು ಬರೆ ಹಾಕಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.

ಸುರತ್ಕಲ್ ಪೊಲೀಸರ ವಾಹನ ನಿಲುಗಡೆ, ಓಡಾಟಕ್ಕೆ ಹಾಗೂ ಭಾನುವಾರ ಜಲೀಲ್ ಅವರ ಪಾರ್ಥಿವ ಶರೀರ ಕೊಂಡೊಯ್ಯಲು ಸುರತ್ಕಲ್ ಜಂಕ್ಷನ್ ನಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಸೋಮವಾರವೂ ಬ್ಯಾರಿಕೇಡ್ ತೆರವುಗೊಳಿಸಲಾಗಿಲ್ಲ. ಪೊಲೀಸರ ಉಪಸ್ಥಿತಿಯೂ ಇಲ್ಲ. ವಾಹನ ಸವಾರರು ಪರದಾಡುವಂತಾಗಿದೆ.

ಸುರತ್ಕಲ್ ಜಂಕ್ಷನ್ ಬಂದ್ ಮಾಡಿರುವ ಕಾರಣ ಹಾಗೂ ಸೋಮವಾರವಾಗಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಆಂಬುಲೆನ್ಸ್ ಒಂದು ಫ್ಲೈ ಓವರ್ ನಲ್ಲಿ ಬಾಕಿ ಆದ ಘಟನೆಯೂ ನಡೆದಿದೆ.

ಇನ್ನು ಬ್ಯಾರಿಕೇಡ್ ಹಾಕಿದ ಉದ್ದೇಶವಾದರೂ ಏನು ಎಂಬುದುದನ್ನು ಸಾರ್ವಜನಿಕರ ಪ್ರಶ್ನಿಸುತ್ತಿದ್ದು, ರಸ್ತೆಯ ನಡುವೆ ವಾಹನ ಪಾರ್ಕಿಂಗ್ ಮಾಡಲಾಗುತ್ತಿದೆ.

- Advertisement -

Related news

error: Content is protected !!