Tuesday, April 16, 2024
spot_imgspot_img
spot_imgspot_img

ಸುರತ್ಕಲ್ ಟೋಲ್‌ಗೇಟ್ ಹೆಜಮಾಡಿ ಟೋಲ್‌ಗೇಟ್ ಜೊತೆ ವಿಲೀನ – ಟೋಲ್ ದರ ಮತ್ತಷ್ಟೂ ಹೆಚ್ಚಳ; ಡಿ.1 ರಿಂದ ಜಾರಿ …!

- Advertisement -G L Acharya panikkar
- Advertisement -

ಮಂಗಳೂರು: ಭಾರಿ ಹೋರಾಟ, ನಿರಂತರ ಪ್ರ ತಿಭಟನೆಗೆ ಕಾರಣವಾಗಿರುವ ಮಂಗಳೂರು ಹೊರವಲಯದ ಸುರತ್ಕ ಲ್ ಎನ್ಐಟಿಕೆ ಸಮೀಪದ ಕೊನೆಗೂ ಹೆಜಮಾಡಿ ಟೋಲ್ ಪ್ಲಾಝಾಜತೆ ವಿಲೀನಗೊಳಿಸಿ ಭಾರತೀಯ ರಾಷ್ಟ್ರೀ ಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ.

ಡಿಸೆಂಬರ್ 1ರಿಂದ ಈ ಆದೇಶ ಕಾರ್ಯರೂಪಕ್ಕೆ ಬರಲಿದ್ದು , ಟೋಲ್ ದರ ಹೆಚ್ಚಾಗಲಿದೆ. ಟೋಲ್ ಸಂಗ್ರಹ ಸಂದರ್ಭ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ ನೋಡಿಕೊಳ್ಳಬೇಕು ಎಂದು ಉಡುಪಿ ಡಿಸಿಗೆ ಪ್ರಾಧಿಕಾರ ಸೂಚನೆ ನೀಡಿದೆ. ಟೋಲ್ ವಿಲೀನ ಕುರಿತು ಹೆದ್ದಾರಿ ಪ್ರಾಧಿಕಾರ ಗುರುವಾರ ಉಡುಪಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದು , ಡಿಸೆಂಬರ್ 1ರಿಂದ ಅನ್ವ ಯವಾಗುವಂತೆ ಮುಕ್ಕ ಟೋ ಲ್ ವಿಲೀನಗೊಂಡಿದ್ದು , ಇದರಿಂದ ನಿರೀಕ್ಷೆಯಂತೆ ಹೆಜಮಾಡಿಯಲ್ಲಿ ಟೋಲ್ ಮೊತ್ತ ದುಬಾರಿಯಾಗಲಿದೆ.

ಸುರತ್ಕ ಲ್-ಬಿಸಿ ರೋಡ್ ನಡುವಿನ ಚತುಷ್ಪ ಥ ಹೆದ್ದಾರಿ ಕಾಮಗಾರಿ ನಡೆಸಿದ್ದ ಇರ್ಕಾನ್ ಪರವಾಗಿ ಹೆದ್ದಾರಿ ಪ್ರಾಧಿಕಾರ ಸುರತ್ಕಲ್ ನಲ್ಲಿ ಅಳವಡಿಸಿದ್ದ ಎನ್ಎಂಪಿ ರೋಡ್ ಕನೆಕ್ಟಿ ವಿಟಿ ರಸ್ತೆಯ ಟೋಲ್ ಸಂಗ್ರಹವನ್ನು ಹೆಜಮಾಡಿ ನವಯುಗದ ಕಂಪನಿಯ ಟೋಲ್‌ಗೇಟ್ ಜತೆ ವಿಲೀನಗೊಳಿಸಲಾಗಿದೆ. ಸುರತ್ಕಲ್ ಸುಂಕ ದರವನ್ನೂ ಹೆಜಮಾಡಿ ಜತೆ ಸೇರ್ಪಡೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದೆ. ಟೋಲ್ ಸಂಗ್ರಹ ಸಂದರ್ಭ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ ನೋಡಿಕೊಳ್ಳಬೇಕು.

ಒಂದು ವೇಳೆ ಹೆಜಮಾಡಿಯಲ್ಲಿ ವಿಲೀನದ ಬಳಿಕ ಏರಿಕೆಯಾದ ಸುಂಕ ದರಗಳ ಬಳಿಕ ಟೋಲ್ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ರಾಷ್ಟ್ರೀ ಯ ಹೆದ್ದಾರಿ ಪ್ರಾಧಿಕಾರ ಜತೆಗಿನ ರಾಜ್ಯ ಸರಕಾರದ ಒಪ್ಪಂದದಂತೆ ನಷ್ಟವನ್ನು ರಾಜ್ಯ ಸರಕಾರ ಭರಿಸಬೇಕಾಗುತ್ತದೆ. ಉಡುಪಿ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಾಯ, ನೆರವು, ಪೊಲೀಸ್ ಭದ್ರತೆ ಒದಗಿಸಬೇಕು. ಇದು ಡಿಸೆಂಬರ್ 1ರ ಮಧ್ಯ ರಾತ್ರಿಯಿಂದಲೇ ಚಾಲ್ತಿಗೆ ಬರಲಿದೆ ಎಂದು ಉಡುಪಿ ಜಿಲ್ಲಾಡಳಿತಕ್ಕೆ ಬರೆದ ಪತ್ರದಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಎಚ್ಎಸ್ ಲಿಂಗೇಗೌಡ ತಿಳಿಸಿದ್ದಾರೆ.

- Advertisement -

Related news

error: Content is protected !!