Friday, May 3, 2024
spot_imgspot_img
spot_imgspot_img

ಸುರತ್ಕಲ್ : ನೇಣು ಬಿಗಿದು ಬಾಲಕ ಆತ್ಮಹತ್ಯೆ

- Advertisement -G L Acharya panikkar
- Advertisement -

ಸುರತ್ಕಲ್‌ : 7ನೇ ತರಗತಿ ಕಲಿಯುತ್ತಿರುವ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುರತ್ಕಲ್‌ ಸಮೀಪದ ಕೃಷ್ಣಾಪುರದ ಖಾಸಗಿ ಶಾಲಾ ವಿದ್ಯಾರ್ಥಿ ಕಾಟಿಪಳ್ಳದ ಹರ್ಷಿತ್‌ (13) ಮೃತ ವಿದ್ಯಾರ್ಥಿ.

ಪ್ರತೀ ವಾರದ ಕೊನೆಯಲ್ಲಿ ಸೂರಿಂಜೆಯಲ್ಲಿರುವ ತನ್ನ ಅಜ್ಜನ ಮನೆಗೆ ಹೋಗುವುದು ವಾಡಿಕೆ. ಈ ಬಾರಿಯೂ ಶಾಲೆ ಮುಗಿಸಿ ಶನಿವಾರ ತೆರಳಿದ್ದ ಹರ್ಷಿತ್‌ ರವಿವಾರ ಮುಂಜಾನೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅನಿರೀಕ್ಷಿತವಾಗಿ ಯಾವುದೋ ಕಾರಣಕ್ಕೆ ಮನನೊಂದು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಈತನ ತಂದೆ ಸುಧಾಕರ ದೇವಾಡಿಗ ಸುರತ್ಕಲ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!