Saturday, April 20, 2024
spot_imgspot_img
spot_imgspot_img

ಸುರತ್ಕಲ್‌: ಸುಂಕದ ವಿಚಾರವಾಗಿ ಟೋಲ್‌ಗೇಟ್‌ ಸಿಬ್ಬಂದಿ ಹಾಗೂ ಶಾಲಾ ಬಸ್‌ ಸಿಬ್ಬಂದಿ ನಡುವೆ ಮಾತಿನ ಚಕಮಕಿ

- Advertisement -G L Acharya panikkar
- Advertisement -

ಸುರತ್ಕಲ್‌: ಸುಂಕ ನೀಡುವ ವಿಚಾರವಾಗಿ ಶಾಲಾ ಬಸ್‌ ಸಿಬ್ಬಂದಿ ಹಾಗೂ ಸುರತ್ಕಲ್‌ ಟೋಲ್‌ಗೇಟ್‌ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದ ಘಟನೆ ಸುರತ್ಕಲ್‌ ಟೋಲ್‌ ಗೇಟ್‌ ಬಳಿ ನಡೆದಿದೆ.

ಸುಮಾರು 6 ಬಸ್‌ಗಳಲ್ಲಿ ಶಾಲೆಯೊಂದರ ವಿದ್ಯಾರ್ಥಿಗಳು ಪ್ರವಾಸ ಹೊರಟಿದ್ದು, ಈ ಬಸ್‌ಗಳು ಸುರತ್ಕಲ್‌ ಟೋಲ್‌ಗೇಟ್‌ ಮುಂಭಾಗ ಬರುತ್ತಿದ್ದಂತೆಯೇ ಟೋಲ್‌ ಸಿಬ್ಬಂದಿ ಟೋಲ್‌ ಸುಂಕ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಆದರೆ, ಬಸ್‌ ಸಿಬ್ಬಂದಿ “ಇದು ಅಕ್ರಮ ಟೋಲ್‌ಗೇಟ್‌, ಇದರ ತೆರವಿಗೆ ಕೇಂದ್ರ ಸರಕಾರ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ಹೀಗಿರುವಾಗ ಸುಂಕ ಪಡೆಯುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಟೋಲ್‌ ಸಿಬ್ಬಂದಿ ಮತ್ತು ಬಸ್‌ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಮಾತಿಗೆ ಮಾತು ಬೆಳೆದು ಹೊಡೆದಾಟದವರೆಗೂ ತಲುಪಿತ್ತು ಎಂದು ತಿಳಿದುಬಂದಿದೆ.

ಸುಮಾರು 6 ಬಸ್‌ಗಳು ಏಕಕಾಲದಲ್ಲಿ ಟೋಲ್‌ ಗೇಟ್‌ ಬಳಿ ಬಂದಿದ್ದ ಕಾರಣ ಸುಮಾರು ಅರ್ಧ ಗಂಟೆಗಳ ಕಾಲ ಟೋಲ್‌ಗೇಟ್‌ ಬಳಿ ಮಂಗಳೂರು ಕಡೆ ತೆರಳುತ್ತಿದ್ದ ವಾಹನಗಳು ಬಾಕಿಯಾಗಿದ್ದವು ಎನ್ನಲಾಗಿದೆ.

- Advertisement -

Related news

error: Content is protected !!