Monday, April 29, 2024
spot_imgspot_img
spot_imgspot_img

ಹಲವಾರು ಬ್ಯಾಂಕ್​ಗಳಿಗೆ ನಕಲಿ ದಾಖಲೆ ಬಳಸಿ ಕೋಟಿ ಕೋಟಿ ವಂಚಿಸಿದ ದಂಪತಿ

- Advertisement -G L Acharya panikkar
- Advertisement -

ಒಂದೇ ಆಸ್ತಿಯನ್ನು ಅಡವಿಟ್ಟು ಮತ್ತು ಇಲ್ಲದ ಆಸ್ತಿಯ ಬಗ್ಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ದಂಪತಿಯೊಬ್ಬರು ಬೆಂಗಳೂರಿನಲ್ಲಿ ಸುಮಾರು 15 ಬ್ಯಾಂಕುಗಳಿಗೆ ಕೋಟಿ ಕೋಟಿ ರೂಪಾಯಿ ವಂಚಿಸಿದ ಪ್ರರಕಣ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ಬ್ಯಾಂಕ್​ಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳು, ಪ್ರಾದೇಶಿಕ ಸಹಕಾರಿ ಬ್ಯಾಂಕ್‌ಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಸೇರಿವೆ.

ಕೆಎಸ್ ನಾಗೇಶ್ ಮತ್ತು ಸುಮಾ ಬಿಎಸ್ ವಂಚಿಸಿದ ದಂಪತಿ

ಸಾಲ ಮರು ಪಾವತಿ ಮಾಡದ ಕಾರಣ ಜಪ್ತಿ ಮಾಡಲು ಹೋದ ಬ್ಯಾಂಕ್ ಅಧಿಕಾರಿಗಳೇ ದಂಪತಿಯ ಕೃತ್ಯದಿಂದ ಬೇಸ್ತು ಬೀಳುವಂತಾಗಿದೆ. ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರಿನಲ್ಲಿ ಆಸ್ತಿಯನ್ನು ಜಪ್ತಿ ಮಾಡಲು ಬ್ಯಾಂಕ್ ಅಧಿಕಾರಿಗಳು ಹೋದಾಗ, ಈಗಾಗಲೇ ಅನೇಕ ಹಣಕಾಸು ಸಂಸ್ಥೆಗಳಿಗೆ ಆ ಜಾಗವನ್ನು ಒತ್ತೆ ಇಟ್ಟಿರುವುದು ಕಂಡುಬಂದಿದೆ. ಅಧಿಕಾರಿಗಳು ಬೇಗೂರು ಸಬ್ ರಿಜಿಸ್ಟ್ರಾರ್ ಕಚೇರಿ, ಬಿಬಿಎಂಪಿ ಮತ್ತು ಬಿಡಿಎಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ, ಬೇಗೂರಿನಲ್ಲಿ ವಿವಿಧ ನಂಬರ್‌ಗಳಲ್ಲಿ ತೋರಿಸಿರುವ ಜಮೀನು / ಸೈಟ್‌ಗಳ ದಾಖಲೆಗಳು ನಕಲಿ ಎಂದು ತಿಳಿದುಬಂದಿದೆ.

ಶ್ರೀನಿಧಿ ಮ್ಯಾನುಫ್ಯಾಕ್ಚುರರ್ಸ್ ಮತ್ತು ಶ್ರೀನಿಧಿ ಮಸಾಲಾ ಕಂಪನಿಗಳಿಗೆ ಯಂತ್ರೋಪಕರಣಗಳನ್ನು ಖರೀದಿಸಲೆಂದು ಕೆಎಸ್ ನಾಗೇಶ್ ಮತ್ತು ಸುಮಾ ಬಿಎಸ್ ದಂಪತಿ ಸಾಲ ಪಡೆದಿದ್ದರು. ಸಾಲ ಮತ್ತು ಬಡ್ಡಿಯನ್ನು ವಸೂಲಿ ಮಾಡಲು 15 ಕ್ಕೂ ಹೆಚ್ಚು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಮುಂದಾಗಿವೆ.

- Advertisement -

Related news

error: Content is protected !!