Monday, May 6, 2024
spot_imgspot_img
spot_imgspot_img

ಸುಳ್ಯದ ಯುವಕ ಬೆಂಗಳೂರಿನಲ್ಲಿ ಮಹಡಿಯಿಂದ ಬಿದ್ದು ಮೃತ್ಯು

- Advertisement -G L Acharya panikkar
- Advertisement -

ಸುಳ್ಯದ ಯುವಕ ಬೆಂಗಳೂರಿನಲ್ಲಿ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಕಳಂಜ ಗ್ರಾಮದ ಮಣಿಮಜಲು ನಿವಾಸಿ ಯತೀಶ ಮೃತ ಯುವಕ. ಇವರು ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿದ್ದು ಎ. 13 ರಂದು ರಾತ್ರಿ ತಾನಿದ್ದ ರೂಮ್ ನ ಬಳಿ ಮಹಡಿಯಿಂದ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದರೆನ್ನಲಾಗಿದೆ.

ಈ ವೇಳೆ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕಳೆದೊಂದು ವಾರದಿಂದ ನೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಿನ್ನೆ ರಾತ್ರಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!