Thursday, June 18, 2026
spot_imgspot_img
spot_imgspot_img

ಸುಳ್ಯ: ಕುಸಿದು ಬಿದ್ದು ಯುವಕ ಮೃತ್ಯು

- Advertisement -
- Advertisement -

ಸುಳ್ಯ: ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಸುಳ್ಯ ಕಸಬಾ ಗ್ರಾಮದಿಂದ ವರದಿಯಾಗಿದೆ.

ಕುದ್ಪಾಜೆ ಗೋಪಾಲ ಮಣಿಯಾಣಿ ಅವರ ಪುತ್ರ ಅಶೋಕ(41ವ.) ಮೃತಪಟ್ಟ ಯುವಕ.

ಮೆಕ್ಯಾನಿಕ್ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಡಿ.3 ರಂದು ರಾತ್ರಿ ಮನೆಯೊಳಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ತಲೆಗೆ ಗಾಯವಾಗಿತ್ತು. ತಕ್ಷಣ ಅವರನ್ನು ಸರಕಾರಿ ಆಸ್ಪತ್ರೆಗೆ ಕರೆತಂದರೂ ಪ್ರಥಮ ಚಿಕಿತ್ಸೆ ನೀಡಿದ ಸ್ವಲ್ಪ ಸಮಯದ ಬಳಿಕ ಮೃತಪಟ್ಟರೆಂದು ತಿಳಿದುಬಂದಿದೆ.

ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

- Advertisement -

Related news

error: Content is protected !!