Thursday, April 25, 2024
spot_imgspot_img
spot_imgspot_img

ಸುಳ್ಯ: (ದಿ:29-31) ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ

- Advertisement -G L Acharya panikkar
- Advertisement -

ಸುಳ್ಯ: ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರ ಕುರುಂಜಿ, ಕಾಂತಮಂಗಲ ಇಲ್ಲಿ ವಾರ್ಷಿಕ ಉತ್ಸವವು ದೈವಜ್ಞರಾದ ಕಾರ್ಕಳ ಕೊಂಡಜಾಲು ಶ್ರೀ ಸೀತಾರಾಮ ಉಪಾಧ್ಯಾಯ ನೇತೃತ್ವದಲ್ಲಿ ದಿನಾಂಕ: 29-01-2023ರಿಂದ 31-01-2023ರವರೆಗೆ ನಡೆಯಲಿದೆ.

ದಿನಾಂಕ 29-01-2023ನೇ ರವಿವಾರ ಸಾಯಂಕಾಲ ಗೋಧೂಳಿ ಲಗ್ನದಲ್ಲಿ ಶ್ರೀಕ್ಷೇತ್ರ ಗುಡ್ಡಮ್ಮ ದೇವಿ ಮತ್ತು ಸಹಪರಿವಾರ ದೈವಗಳ ಕವಾಟ ಉದ್ಘಾಟನೆ, ದೇವರ ಪ್ರಾರ್ಥನ ವಾಸ್ತು ಪೂಜೆ, ಕ್ಷೇತ್ರ ಶುದ್ದೀಕರಣ ನಡೆಯಲಿದೆ. ನಂತರ ದಿನಾಂಕ 30-01-2023ನೇ ಸೋಮವಾರ ಬೆಳಗ್ಗೆ ಗಂಟೆ 8.00ರಿಂದ ಸ್ವಸ್ತಿ ಪುಣ್ಯಾಹವಾಚನೆ ನಿರ್ಮಾಲ್ಯ ವಿಸರ್ಜನೆ ಪೂಜೆ, ಪ್ರತ್ಯೇಕ ಪ್ರತ್ಯೇಕ ಕಲಶಾಧಿವಾಸ, ಪ್ರಧಾನ ಹೋಮ, ಪಂಚಾಮೃತ ಸಹಿತ ಕಲಶಾಭಿಷೇಕ, ದೇವತಾರಾಧನೆ, ದೈವರಾಧನೆ, ಪ್ರಸನ್ನ ಪೂಜೆ, ರಾತ್ರಿ ಸಂಧ್ಯಾಕಾಲ ದುರ್ಗಾನಮಸ್ಕಾರ ಪೂಜೆ, ಪ್ರಸಾದ ವಿತರಣೆ ನಾಗ ದೇವರಲ್ಲಿ ಪುಣ್ಯಾಹವಾಚನೆ, ಪವಮಾನಯಾಗ, ನವಕ ಪ್ರಧಾನ, ಪಂಚಾಮೃತ ಸಹಿತಕಲಾಭಿಷೇಕ, ರಕ್ತೇಶ್ವರಿ ಆರಾಧನೆ, ಆಶ್ಲೇಷ ಬಲಿ ಪೂಜೆ ನಾಗದೇವರ ತಂಬಿಲ, ಪ್ರಸನ್ನ ಪೂಜೆ ನಡೆಯಲಿದೆ.

ದಿನಾಂಕ:31-01-2023ನೇ ಮಂಗಳವಾರ ಬೆಳಗ್ಗೆ ಗಂಟೆ 8.00ರಿಂದ ಸ್ವಸ್ತಿ ಪುಣ್ಯಾಹವಾಚನೆ, ನಿರ್ಮಾಲ್ಯ ವಿಸರ್ಜನೆ, ರುದ್ರ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ ಪೂರ್ಣಾಹುತಿ 12.30ಕ್ಕೆ ದೈವ ದೇವರ ಆರಾಧನೆಯ ನಂತರ ಅನ್ನಸಂತರ್ಪಣೆ ನಡೆಯಲ್ಲಿದೆ.ಬಳಿಕ ಸಂಜೆ 5:30ಕ್ಕೆ ಸಂಧ್ಯಾಕಾಲ ಗುತ್ಯಮ್ಮ ದೇವಿಗೆ ರಂಗಪೂಜಾ ಸೇವೆ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!