Friday, April 26, 2024
spot_imgspot_img
spot_imgspot_img

ಸುಳ್ಯ: ಪಯಸ್ವಿನಿ ನದಿಗೆ ಹರಿದು ಬರುವ ನೀರಿನಲ್ಲಿ ಕಸದ ರಾಶಿ; ಕಾಯಿಲೆ ಭೀತಿಯಲ್ಲಿ ಸುತ್ತ ಮುತ್ತಲಿನ ಜನತೆ..!

- Advertisement -G L Acharya panikkar
- Advertisement -

ಸುಳ್ಯ: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಅಲೆಟ್ಟಿ ಗ್ರಾಮದ ಅರಂಬೂರು ಅಂಚೆಯ ಕಲ್ಚರ್ಪೆ ಎಂಬಲ್ಲಿ ಸುಳ್ಯ ನಗರ ಪಂಚಯತ್ ನ ಕಸ ವಿಲೇವಾರಿ ಕಳೆದ 16 ವರ್ಷಗಳಿಂದ ಮಾಡಲಾಗುತ್ತಿದೆ.

ವಿಪರೀತ ಮಳೆಗೆ ಪೂಮಲೆ ಕಾಡಿನ ಮಡಿಲಲ್ಲಿರುವ ಕಲ್ಚರ್ಪೆ ಎಂಬಲ್ಲಿ ಹಾಕಿರುವ ಕಸವನ್ನು ನಿನ್ನೆದಿನ ನಗರ ಪಂಚಯತ್ ನವರು ಬಂದು ಜೆಸಿಬಿ ಮೂಲಕ ಕಣಿ ಮಾಡಿ ಕೊಟ್ಟಿರುತ್ತಾರೆ.

ಕಣಿ ಮಾಡಿ ಕೊಟ್ಟ ಪರಿಣಾಮವಾಗಿ ಪುಮಾಲೆ ಕಾಡಿನಿಂದ ಹರಿಯುವ ನೀರಿನ ರಭಸಕ್ಕೆ ಟನ್ ಗಟ್ಟಲೆ ಕಸವೆಲ್ಲ ಪಯಸ್ವಿನಿ ನದಿಗೆ ಹೊಗಿರುತ್ತದೆ. ಈ ಪಯಸ್ವಿನಿ ನದಿಯ ನೀರನ್ನು ಸುಳ್ಯದ ಜನತೆ ಕುಡಿಯುತ್ತಿದ್ದು , ಈ ಕಸದಿಂದ ಯಾವ ಕಾಯಿಲೆ ಬರಬಹುದು ಎಂದು ಜನ ಆತಂಕದಲ್ಲಿದ್ದಾರೆ.

- Advertisement -

Related news

error: Content is protected !!