Sunday, June 29, 2025
spot_imgspot_img
spot_imgspot_img

ಸುಳ್ಯ: ಮದ್ರಸದಿಂದ ಮನೆಗೆ ಹಿಂತಿರುಗುತ್ತಿದ್ದ ಬಾಲಕಿಗೆ ಬೈಕ್ ಡಿಕ್ಕಿಯಾಗಿ ಸಾವು

- Advertisement -
- Advertisement -

ಸುಳ್ಯ: ಮದ್ರಸದಿಂದ ಮನೆಗೆ ಹಿಂತಿರುಗುತ್ತಿದ್ದ ಬಾಲಕಿಗೆ ಬೈಕ್ ಡಿಕ್ಕಿಯಾಗಿ ಬಾಲಕಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಸುಳ್ಯದ ಅರಂಬೂರು ಬಳಿಯ ಪಾಲಡ್ಕ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಪಾಲಡ್ಕದ ರಶೀದ್ ಎಂಬವರ ಪುತ್ರಿ ರಿಫಾ (7 ವರ್ಷ) ಮೃತಪಟ್ಟ ಬಾಲಕಿ.

ರಿಫಾ ಇಂದು ಬೆಳಿಗ್ಗೆ 8.45ರ ಸುಮಾರಿಗೆ ಅರಂಬೂರು ಮದ್ರಸಾದಿಂದ ಹಿಂತಿರುಗಿ ಪಾಲಡ್ಕದಲ್ಲಿ ಮನೆ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಅರಂತೋಡು ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕೊಂಡು ಡಿಕ್ಕಿ ಹೊಡೆದಿದೆ. ತಕ್ಷಣ ಗಾಯಾಳು ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಬದುಕಿಸಿಕೊಳ್ಳಲಾಗಲಿಲ್ಲವೆಂದು ತಿಳಿದುಬಂದಿದೆ.

astr
- Advertisement -

Related news

error: Content is protected !!