Thursday, May 2, 2024
spot_imgspot_img
spot_imgspot_img

ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ಕಚೇರಿಯಲ್ಲಿ ಸಾವರ್ಕರ್ ಪೋಟೋ

- Advertisement -G L Acharya panikkar
- Advertisement -

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್ ಕಚೇರಿಯಲ್ಲಿ ವೀರ ಸಾವರ್ಕರ್ ಪೋಟೋ ಆಳಡಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಪಾಲಿಕೆಯ ಸುರತ್ಕಲ್‌ನ ಹೊಸ ವಲಯ ಕಚೇರಿ ನಿನ್ನೆ ಉದ್ಘಾಟನೆಗೊಂಡಿತ್ತು. ಅದರಲ್ಲಿರುವ ಮಂಗಳೂರು ಉತ್ತರ ಶಾಸಕ ವೈ ಭರತ್ ಶೆಟ್ಟಿ ತನ್ನ ಶಾಸಕ ಕಛೇರಿಯಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಿ ಉದ್ಘಾಟನೆ ವೇಳೆ ಅದಕ್ಕೆ ಪುಷ್ಪಾರ್ಚನೆಗೈದು ಗೌರವ ಸೂಚಿಸಿದ್ದಾರೆ.

ಅಲ್ಲದೆ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಮಂಗಳೂರು ನಗರ ಹೊರವಲಯದ ಸುರತ್ಕಲ್ ಜಂಕ್ಷನ್‍ಗೆ ಸಾವರ್ಕರ್ ಹೆಸರಿಡಲು ಒತ್ತಾಯಿಸಿದ್ದಾರೆ. ಈ ಕುರಿತು ಶಾಸಕ ಭರತ್ ಶೆಟ್ಟಿ ಅವರು ಕಳೆದ ವರ್ಷವೇ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಸುರತ್ಕಲ್ ಜಂಕ್ಷನ್‍ಗೆ ಸಾವರ್ಕರ್ ಹೆಸರಿಡುವ ಪ್ರಸ್ತಾಪ ತೀವ್ರ ಚರ್ಚೆಗೆ ಕಾರಣವಾಗಿದೆ. ಹಿಂದೂ ಸಂಘಟನೆಗಳು, ಸ್ಥಳೀಯರು ಸಾವರ್ಕರ್ ಹೆಸರಿಡಲು ಮನವಿ ಸಲ್ಲಿಸಿದ್ದರು. ಒಂಬತ್ತು ತಿಂಗಳ ಹಿಂದೆ ಈ ಪ್ರಕ್ರಿಯೆ ಶುರು ಆಗಿದೆ. ಸ್ವಾತಂತ್ರ್ಯ ಸೇನಾನಿ ವೀರಸಾವರ್ಕರ್ ವಿರುದ್ಧ ಯಾಕೆ ಈ ಮನಸ್ಥಿತಿಯಲ್ಲಿದ್ದಾರೆ ಗೊತ್ತಿಲ್ಲ. ಸಂಸತ್ತಿನ ಒಳಗಡೆ ಸಾವರ್ಕರ್ ಫೋಟೋ ಇರುವಾಗ ವಿರೋಧ ಯಾಕೆ ಎಂದು ಪ್ರಶ್ನಿಸಿದ್ದಾರೆ.

- Advertisement -

Related news

error: Content is protected !!