Sunday, June 21, 2026
spot_imgspot_img
spot_imgspot_img

ಸುಳ್ಯ: ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡದ ಗೋಡೆ ಮಗುಚಿ ಬಿದ್ದು ವ್ಯಾಪಾರಿ ಸಾವು!

- Advertisement -
- Advertisement -

ಸುಳ್ಯ : ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡದ ಗೋಡೆ ಮಗುಚಿ ಬಿದ್ದು, ಗುಜಿರಿ ವ್ಯಾಪಾರಿ ಸಾವನ್ನಪ್ಪಿದ ಘಟನೆ ಸುಳ್ಯದ ಗಾಂಧಿನಗರದಲ್ಲಿ ಸಂಭವಿಸಿದೆ. ಮೃತ ವ್ಯಕ್ತಿ ಸುಳ್ಯದ ಎಪಿಎಂಸಿ ಬಳಿ ಗುಜಿರಿ ವ್ಯಾಪಾರ ನಡೆಸುತ್ತಿದ್ದ ಅಬ್ದು ಲ್ ಖಾದರ್(48) ಎನ್ನಲಾಗಿದೆ.

ಅಬ್ದುಲ್ ಖಾದರ್ ರವರು ಹಲವಾರು ವರ್ಷಗಳಿಂದ ಸುಳ್ಯದಲ್ಲಿ ಗುಜುರಿ ವ್ಯಾಪಾರ ನಡೆಸುತ್ತಿದ್ದು , ಹಳೆ ಕಟ್ಟಡದ ಕಬ್ಬಿ ಣ ಸಾಮಾಗ್ರಿಗಳನ್ನು ತೆಗೆಯುವ ವ್ಯಾಪಾರ ನಡೆಸುತ್ತಿದ್ದರು. ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿ ಕಳೆದ ಕಳೆದ ವರ್ಷಗಳಿಂದ ವ್ಯವಹಾರ ಸ್ಥಗಿತಗೊಳಿಸಿದ್ದು , ಹಳೆಯ ಕಟ್ಟ ಡವನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದರು.

ತಮ್ಮ ಕೆಲಸದಾಳುಗಳ ಜೊತೆ ಇಂದು ಬೆಳಿಗ್ಗೆ ಗೋಡೆಯ ಮೇಲ್ಭಾಗದಲ್ಲಿದ್ದ ಕಬ್ಬಿಣದ ಟ್ರಸ್ ನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಗೋಡೆ ಮಗುಚಿ ಅಬ್ದುಲ್ ಖಾದರ್ ರವರ ಮೇಲೆ ಬಿದ್ದುದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

- Advertisement -

Related news

error: Content is protected !!