Tuesday, April 30, 2024
spot_imgspot_img
spot_imgspot_img

ಸೇಡು ತೀರಿಸಿಕೊಳ್ಳಲು ನೆರೆಮನೆಯವನ ಸಾವಿರಾರು ಕೋಳಿಗಳನ್ನು ಕೊಂದ ವ್ಯಕ್ತಿಗೆ ಜೈಲುಶಿಕ್ಷೆ

- Advertisement -G L Acharya panikkar
- Advertisement -

ತನ್ನ ನೆರೆಹೊರೆಯವರ ವಿರುದ್ಧ ಸೇಡು ತೀರಿಸಿಕೊಳ್ಳಲು ಆತ ಮಾಡಿದ್ದ ಖತರ್ನಾಕ್ ಕೆಲಸದಿಂದ ಕಂಬಿ ಎಣಿಸುವಂತಾಗಿದೆ. ಸಾವಿರಕ್ಕೂ ಅಧಿಕ ಕೋಳಿಗಳನ್ನು ಕೊಂದ ಆರೋಪದಡಿಯಲ್ಲಿ ಪೊಲೀಸರು ಅಪರಾಧಿಯನ್ನು ಬಂಧಿಸಿ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ತನ್ನ ನೆರೆಯವರಿಗೆ ಸೇರಿದ 1,100 ಕೋಳಿಗಳನ್ನು ಹೆದರಿಸಿ ಸಾಯಿಸಿದ ಆರೋಪದ ಮೇಲೆ ಚೀನಾದ ವ್ಯಕ್ತಿಯೊಬ್ಬನಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ಹೆಂಗ್ಯಾಂಗ್ ಕೌಂಟಿಯ ನ್ಯಾಯಾಲಯವು ಮಂಗಳವಾರ ಚೀನಾ ಡೈಲಿ ಪ್ರಕಾರ ಝಾಂಗ್‌ಗೆ ಉದ್ದೇಶ ಪೂರ್ವಕವಾಗಿ ಆಸ್ತಿ ನಷ್ಟವನ್ನು ಉಂಟುಮಾಡಿದೆ ಎಂದು ತೀರ್ಪು ನೀಡಿದೆ.

ತನ್ನ ನೆರೆಹೊರೆಯವರ ವಿರುದ್ಧ ಸೇಡು ತೀರಿಸಿಕೊಳ್ಳುವ ಯೋಜನೆಯ ಒಂದು ಭಾಗವಾಗಿತ್ತು ಎನ್ನಲಾಗಿದೆ. ನೆರೆಮನೆಯ ಝಾಂಗ್ ಅನುಮತಿಯಿಲ್ಲದೇ ಕತ್ತರಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ, ತನ್ನ ನೆರೆಮನೆಯ ಝಾಂಗ್‍ನ ಕೋಳಿ ಫಾರ್ಮ್‍ಗೆ ನುಸಿಳಿ, ಅಲ್ಲಿದ್ದ ಅಲ್ಲಿ ಬ್ಯಾಟರಿ ದೀಪಗಳನ್ನು ಬಳಸಿ ಕೋಳಿಗಳನ್ನು ಭಯಭೀತಗೊಳಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಅಲ್ಲಿದ್ದ 460 ಕೋಳಿಗಳು ಹೆದರಿ ಮೃತಪಟ್ಟಿದ್ದಾವೆ ಎನ್ನಲಾಗಿದೆ. 1,100 ಸತ್ತ ಕೋಳಿಗಳು ಸುಮಾರು 13,840 ಯುವಾನ್ (ರೂ. 1,64,855) ಮೌಲ್ಯದ್ದಾಗಿವೆ ಎಂದು ಚೀನಾದ ಅಧಿಕಾರಿಗಳು ಅಂದಾಜಿಸಿದ್ದಾರೆ.

- Advertisement -

Related news

error: Content is protected !!