Saturday, April 20, 2024
spot_imgspot_img
spot_imgspot_img

ಸೇನಾ ಹೆಲಿಕಾಪ್ಟರ್‌ ದುರಂತಕ್ಕೆ ಹವಾಮಾನದಲ್ಲಾದ ಅನಿರೀಕ್ಷಿತ ಬದಲಾವಣೆಯೇ ಕಾರಣ; ತನಿಖಾ ವರದಿ ಬಹಿರಂಗ

- Advertisement -G L Acharya panikkar
- Advertisement -

ನವದೆಹಲಿ: ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 13 ಮಂದಿಯ ಸಾವಿಗೆ ಕಾರಣವಾದ ಸೇನಾ ಹೆಲಿಕಾಪ್ಟರ್‌ ದುರಂತ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಸಾವಿಗೆ ಹವಾಮಾನದಲ್ಲಿ ಅನಿರೀಕ್ಷಿತ ಬದಲಾವಣೆಯೇ ಕಾರಣ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ತಂಡ ವರದಿ ತಿಳಿಸಿದೆ.

ಪ್ರಾಥಮಿಕ ತನಿಖೆಯ ಬಳಿಕ ಈ ದುರಂತಕ್ಕೆ ಪ್ರತಿಕೂಲ ಹವಾಮಾನದಲ್ಲಿ ಹೆಲಿಕಾಪ್ಟರ್ ಹಾರಾಟವೇ ಕಾರಣ ಹೊರತು ತಾಂತ್ರಿಕ ದೋಷವಲ್ಲ ಎಂದು ತಿಳಿದು ಬಂದಿದೆ.

vtv vitla
vtv vitla

ಇನ್ನು ಹೆಲಿಕಾಪ್ಟರ್‌ನ ಕಾಕ್‌ಪಿಟ್‌ನ ದತ್ತಾಂಶಗಳನ್ನು ಪರಿಶೀಲಿಸಿರುವ ತಂಡ, ಅಪಘಾತಕ್ಕೂ ಮುನ್ನ ಪೈಲಟ್‌ ಗಳು ಗೊಂದಲಕ್ಕೆ ಒಳಗಾಗಿರುವುದು ವಾಯ್ಸ್‌ ರೆಕಾರ್ಡರಲ್ಲಿ ದಾಖಲಾಗಿರುವ ಧ್ವನಿಮುದ್ರಿಕೆಗಳನ್ನು ಪರೀಕ್ಷೆಗೆ ಒಳಪಡಿಸಿ, ಅಪಘಾತಕ್ಕೆ ಪ್ರಾಥಮಿಕ ಕಾರಣಗಳನ್ನು ಕಂಡು ಹಿಡಿದಿದೆ.

ಡಿಸೆಂಬರ್ 8 ರಂದು ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು ತಮ್ಮ ಪತ್ನಿ ಮಧುಲಿಕಾ ರಾವತ್ ಹಾಗೂ ಸಲಹೆಗಾರ ಬ್ರಿಗೇಡಿಯರ್ ಎಲ್ ಎಸ್ ಲಿದ್ದಾರ್ ಅವರೊಂದಿಗೆ ಸೇನಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಅವಘಡ ನಡೆದು ಅಪಘಾತದಲ್ಲಿ 14 ಮಂದಿ ಸಾವನ್ನಪ್ಪಿದ್ದರು.

vtv vitla
vtv vitla
suvarna gold
- Advertisement -

Related news

error: Content is protected !!