Friday, April 26, 2024
spot_imgspot_img
spot_imgspot_img

ಸೋಮವಾರದಿಂದ ಅನ್ ಲಾಕ್ 3.0 ಜಾರಿ, ಬಹುತೇಕ ನಿರ್ಬಂಧಗಳ ಸಡಿಲಿಕೆ; ದೇವಸ್ಥಾನ, ಮಾಲ್ ಓಪನ್, ವೀಕೆಂಡ್ ಕರ್ಫ್ಯೂ ರದ್ದು, ಯಾವುದಕ್ಕೆಲ್ಲಾ ಅವಕಾಶವಿದೆ..? ಇಲ್ಲಿದೆ ಸಂಪೂರ್ಣ ವಿವರ

- Advertisement -G L Acharya panikkar
- Advertisement -

ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಚಿವರು, ಅಧಿಕಾರಿಗಳು ತಜ್ಞರೊಂದಿಗೆ ಸಭೆ ನಡೆಸಿ ಜುಲೈ 5 ರಿಂದ 19 ರ ವರೆಗೆ 15 ದಿನಗಳ ಕಾಲ ಅನೇಕ ನಿರ್ಬಂಧ ಸಡಿಲಿಕೆ ಮಾಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

  • ಕಚೇರಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆ, ಮಾಲ್ ತೆರೆಯಲು ಅವಕಾಶ
  • ಸರ್ಕಾರಿ, ಖಾಸಗಿ ಕಚೇರಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆ ಶೇಕಡ 100 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು.
  • ಮಾಲ್ ತೆರೆಯಲು ಅವಕಾಶ
  • ಮೆಟ್ರೋ ಸೇರಿ ಸಾರ್ವಜನಿಕ ಸಾರಿಗೆ ಶೇಕಡ 100 ಪ್ರಯಾಣಿಕರೊಂದಿಗೆ ಕಾರ್ಯಾಚರಣೆ
  • ಧಾರ್ಮಿಕ ಸ್ಥಳಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ
  • ಮದುವೆ, ಕೌಟುಂಬಿಕ ಶುಭ ಕಾರ್ಯಕ್ರಮಗಳಲ್ಲಿ 100 ಜನರಿಗೆ ಅವಕಾಶ
  • ಈಜುಕೊಳಗಳಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಅವಕಾಶ
  • ಕ್ರೀಡಾ ಸಂಕೀರ್ಣಗಳಲ್ಲಿ ಕ್ರೀಡಾಪಪಟುಗಳ ಅಭ್ಯಾಸಕ್ಕೆ ಅವಕಾಶ
  • ಅಂತ್ಯಸಂಸ್ಕಾರ 20 ಜನರಿಗೆ ಅವಕಾಶ ನೀಡಲಾಗಿದೆ.

ವೀಕೆಂಡ್ ಕರ್ಫ್ಯೂ ತೆರವು -ನೈಟ್ ಕರ್ಫ್ಯೂ ಜಾರಿ

  • ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ
  • ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದಿಲ್ಲ.

ಸಿನಿಮಾ/ಪಬ್ ಗೆ ಅವಕಾಶ ಇಲ್ಲ -ನಿಯಮ ಪಾಲನೆ ಕಡ್ಡಾಯ

  • ಸಾಮಾಜಿಕ, ಧಾರ್ಮಿಕ ಸಭೆ ಸಮಾರಂಭ, ಪ್ರತಿಭಟನೆ ಇತರೆ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ
  • ಶೈಕ್ಷಣಿಕ ಸಂಸ್ಥೆಗಳು ತೆರೆಯುವ ಪ್ರತ್ಯೇಕ ತೀರ್ಮಾನ ಮಾಡಲಾಗುವುದು
  • ಪಬ್ ಗಳಿಗೆ ಅವಕಾಶ ಇಲ್ಲ, ಬಾರ್ ಗಳಿಗೆ ಅವಕಾಶ ನೀಡಲಾಗಿದೆ.
  • ಚಿತ್ರಮಂದಿರಗಳ ಕಾರ್ಯನಿರ್ವಹಣೆಗೆ ಅವಕಾಶ ಇಲ್ಲ
  • ಜಿಲ್ಲೆಯ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
  • ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಸರ್ಕಾರದ ನಿಯಮ ಪಾಲಿಸಬೇಕಿದೆ.

15 ದಿನಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದರೆ ನಿರ್ಬಂಧ ಸಡಿಲಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.

- Advertisement -

Related news

error: Content is protected !!