Friday, April 19, 2024
spot_imgspot_img
spot_imgspot_img

ಸ್ನೇಹಿತರೊಂದಿಗೆ ಬರ್ತ್‌‌ಡೇ ಆಚರಿಸಿಕೊಂಡ ಯುವತಿ ಅದೇ ದಿನ ರಾತ್ರಿ ಆತ್ಮಹತ್ಯೆ

- Advertisement -G L Acharya panikkar
- Advertisement -

ಸ್ನೇಹಿತರೊಂದಿಗೆ ಸೇರಿ ಜನ್ಮದಿನದ ಸಂಭ್ರಮ ಆಚರಿಸಿಕೊಂಡಿದ್ದ ಯುವತಿ ಅದೇ ದಿನ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹೈದರಾಬಾದ್​ನ ಕುಕ್ಕಟಪಲ್ಲಿಯ ಬಾಲಾಜಿ ನಗರದಲ್ಲಿ ನಡೆದಿದ್ದು, ಮೃತಳನ್ನು ಹರ್ಷಿತಾ (20) ಎಂದು ಗುರುತಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ಹರ್ಷಿತಾ, ಸಿಎ ಅಧ್ಯಯನ ಮಾಡುತ್ತಿದ್ದಳು. ಹರ್ಷಿತಾ ಗುರುವಾರ ತನ್ನ ಜನ್ಮದಿನವನ್ನು ಫ್ರೆಂಡ್ಸ್​ ಜೊತೆ ಆಚರಿಸಿಕೊಂಡಿದ್ದಾಳೆ. ಅಲ್ಲದೇ ಸಿನಿಮಾಗೆ ಹೋಗಿದ್ದಳು. ಬಳಿಕ ಅಂದು ಮಧ್ಯರಾತ್ರಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ತನ್ನ ಬೆಡ್​ ರೂಮ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ.

ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ತಂದೆ ಸಾಯಿಕಿರಣ್​ ಮತ್ತು ತಾಯಿ ನರ್ಮದಾ ನೆಲ್ಲೂರಿಗೆ ತೆರಳಿದ್ದರು. ವಾಪಸ್ ಮನೆಗೆ ಬಂದು ಬಾಗಿಲು ಬಡಿದಿದ್ದಾರೆ. ಎಷ್ಟೇ ಬಡಿದರು ಮಗಳು ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಸಾಯಿಕುಮಾರ್​ ಮನೆಯ ಮಾಲೀಕನ ಸಹಾಯದಿಂದ ಬಾಗಿಲು ಮುರಿದು ಬೆಡ್​ರೂಮ್​ಗೆ ಹೋಗಿ ನೋಡಿದಾಗ ಮಗಳು ಹರ್ಷಿತಾ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದನ್ನು ಪೋಷಕರು ನೋಡಿ ಆಘಾತಕ್ಕೆ ಒಳಗಾಗಿದ್ದಾರೆ.

ಇನ್ನು ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಕುಕ್ಕಟಪಲ್ಲಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓದಿನ ಒತ್ತಡದಿಂದ ಈ ರೀತಿ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಈ ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!