Wednesday, August 12, 2026
spot_imgspot_img
spot_imgspot_img

ಹತ್ಯೆಯಾದ ಹರ್ಷ ಮನೆಗೆ ಮಾಜಿ ಸಿಎಂ ಯಡಿಯೂರಪ್ಪ ಭೇಟಿ: 25 ಲಕ್ಷ ರೂ. ಪರಿಹಾರ ವಿತರಣೆ

- Advertisement -
- Advertisement -

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಾಗಿದ್ದು ತಿಳಿದೇ ಇದೆ. ಈ ಹಿನ್ನಲೆ ಮಾಜಿ ಸಿಎಂ ಯಡಿಯೂರಪ್ಪ ಹರ್ಷ ಅವರ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನಂತರ ರಾಜ್ಯ ಸರಕಾರದ ಪರವಾಗಿ ಹರ್ಷ ಕುಟುಂಬಕ್ಕೆ 25 ಲಕ್ಷ ರೂ.ನ ಪರಿಹಾರದ ಚೆಕ್ ನೀಡಿದರು.

ಸೀಗೆಹಟ್ಟಿಯಲ್ಲಿ ಹರ್ಷ ಕುಟುಂಬಸ್ಥರ ಭೇಟಿ ಬಳಿಕ ಮಾತನಾಡಿದ ಯಡಿಯೂರಪ್ಪ, 26 ವರ್ಷದ ಯುವಕ ಹರ್ಷ ಎಲ್ಲರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ. ಈ ಭಾಗದಲ್ಲಿ ಗೊಂದಲ, ಹೋರಾಟಕ್ಕೆ ಅವಕಾಶ ನೀಡುತ್ತಾ ಇರಲಿಲ್ಲ. ಹಿಂದೂ ಯುವ ಮುಖಂಡನಾಗಿ ಹರ್ಷ ಬೆಳೆಯುತ್ತಿದ್ದ. ಇದನ್ನೂ ಸಹಿಸಕ್ಕಾಗದೇ ಕೆಲವು ಕಿಡಿಗೇಡಿಗಳು ಕೊಲೆ ಮಾಡಿದ್ದಾರೆ.. ಹರ್ಷನ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸರಕಾರದ ಕಡೆಯಿಂದ 25 ಲಕ್ಷ ರೂ. ಚೆಕ್ ಅನ್ನು ಅವರಿಗೆ ಕೊಟ್ಟಿದ್ದೇನೆ. ಹಣ ಮುಖ್ಯ ಅಲ್ಲ. ಹರ್ಷನನ್ನು ಕಳೆದುಕೊಂಡ ಕುಟುಂಬದ ನೋವು ದೊಡ್ಡದು. ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂಬ ಪ್ರಾರ್ಥನೆ ಬಿಟ್ಟರೇ ನಮ್ಮ ಕೈಯಲ್ಲಿ ಏನೂ ಇಲ್ಲ ಎಂದರು.

- Advertisement -

Related news

error: Content is protected !!