Tuesday, July 21, 2026
spot_imgspot_img
spot_imgspot_img

ಹಳೆಯಂಗಡಿ: ಟ್ಯಾಂಕರ್ ಅಡಿಗೆ ಸಿಲುಕಿದ ಬೈಕ್; ಸವಾರ ಸಾವು

- Advertisement -
- Advertisement -

ಹಳೆಯಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಮುಖ್ಯ ಜಂಕ್ಷನ್‌ನಲ್ಲಿ ಬೈಕೊಂದು ಟ್ಯಾಂಕರ್‌ಗೆ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

ಪಕ್ಷಿಕೆರೆ ಹೊಸಕಾಡು ನಿವಾಸಿ ಚರಣ್‌ರಾಜ್‌ ಶೆಟ್ಟಿಗಾರ್‌ (28) ಮೃತ ಯುವಕ. ಮಂಗಳೂರಿನಿಂದ ಉಡುಪಿ ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್‌ನ ಚಕ್ರಕ್ಕೆ ಚರಣ್ ರಾಜ್ ಅವರ ಬೈಕ್ ಸಿಲುಕಿಕೊಂಡಿತ್ತು. ಈ ವೇಳೆ ಬೈಕ್‌ನ್ನು ಟ್ಯಾಂಕರ್‍ ಕೆಲ ದೂರ ಎಳೆದುಕೊಂಡು ಹೋಗಿದೆ. ಈ ವೇಳೆ ಚರಣ್‌ರಾಜ್ ಅವರ ತಲೆ ರಸ್ತಗೆ ಅಪ್ಪಳಿಸಿದ್ದರಿಂದ ತೀವ್ರ ರಕ್ತಸ್ರಾವ ಉಂಟಾಗಿದೆ. ಕೂಡಲೇ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತಾದರೂ ಅವರು ಸಾವನ್ನಪ್ಪಿದರು.

ಸುರತ್ಕಲ್‌ನಲ್ಲಿ ಚರಣ್ ರಾಜ್ ಗ್ರಾಫಿಕ್ ಡಿಸೈನರ್‍ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಚರಣ್ ರಾಜ್ ಅವರಿಗೆ ಕಳೆದ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿತ್ತು. ಮಂಗಳೂರು ಉತ್ತರ ವಲಯದ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!