Thursday, April 25, 2024
spot_imgspot_img
spot_imgspot_img

ಹಿಂದುತ್ವದ ಪಾಠ ನನಗೆ ಅವಶ್ಯಕತೆ ಇಲ್ಲ; ದೀಪು ಶೆಟ್ಟಿಗಾರ್

- Advertisement -G L Acharya panikkar
- Advertisement -

ಮಂಗಳೂರು: ನನಗೆ ಹಿಂದುತ್ವದ ಪಾಠ ಯಾರಿಂದಲೂ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ನನ್ನ ಹಿಂದುತ್ವವನ್ನು ಯಾವುದೇ ಪಕ್ಷಕ್ಕೆ ಏಜೆಂಟ್ ತರ ಬಿಟ್ಟುಕೊಟ್ಟಿಲ್ಲ. ಧರ್ಮದ ವಿಷಯದಲ್ಲಿ ಯಾವುದೇ ಪಕ್ಷದವರು ಮಾತನಾಡಿದಾಗ ಅದಕ್ಕೆ ಸರಿಯಾಗಿ ಅವರಿಗೆ ನ್ಯೂಸ್ ಚಾನೆಲ್ ಗಳ ಡಿಬೆಟ್ ನಲ್ಲಿ ಉತ್ತರ ಕೊಟ್ಟಿದ್ದೇನೆ ಎಂದು ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್ ಹೇಳಿದ್ದಾರೆ.

ಬಿರುವೆರ್ ಕುಡ್ಲ ಸಂಘಟನೆಯ ಬಗ್ಗೆ ಶರಣ್ ಪಂಪ್ ವೆಲ್ ಅವರು ಅವಹೇಳನಾಕಾರಿಯಾಗಿ ಮಾತನಾಡಿದ್ದನ್ನು ಪ್ರಶ್ನಿಸಿದ್ದ ದೀಪು ಶೆಟ್ಟಿಗಾರ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ತರಾಟೆಗೆತ್ತಿಕೊಂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸರಕಾರ ಇದ್ದಾಗ ನನ್ನನ್ನು ಬಿಜೆಪಿ ಅಂತಲೂ ಬಿಂಬಿಸಿದ್ದಾರೆ , ಈಗ ಬಿಜೆಪಿ ಸರ್ಕಾರ ಇದ್ದಾಗ ನನ್ನನ್ನು ಕಾಂಗ್ರೆಸ್ ಅಂತಲೂ ಬಿಂಬಿಸುವುದು ಸಹಜ. ಯಾಕೆಂದರೆ ನನ್ನ ಧ್ವನಿ ಸಾಮಾನ್ಯ ಜನರ ಪರವಾಗಿ ಹೊರತು ರಾಜಕೀಯ ಬಕೆಟ್ ಗಳ ಪರವಾಗಿ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.

ವೈಯಕ್ತಿಕವಾಗಿ ನಮ್ಮ ಸಂಘಟನೆಯ ಬಗ್ಗೆ ಒಬ್ಬರು ಕೊಟ್ಟ ಹೇಳಿಕೆಯನ್ನು ಹಿಡಿದುಕೊಂಡು ಅದಕ್ಕೆ ಪ್ರತ್ಯುತ್ತರ ಕೊಟ್ಟದ್ದಕ್ಕೆ ನನ್ನ ಹಿಂದುತ್ವದ ಬಗ್ಗೆ ಉಳಿದ ಕಾಂಜಿಪಿಂಜಿಗಳು ಮಾತನಾಡುವಂತಹ ಅವಶ್ಯಕತೆ ಇಲ್ಲ. ಯಾಕೆಂದರೆ ಇದು ಧರ್ಮದ ವಿರುದ್ಧ ಹೋರಾಟ ಅಲ್ಲ, ನಮ್ಮ ಸಂಘಟನೆಯ ಬಗ್ಗೆ ತಿಳಿಯದೆ ಒಬ್ಬರು ನೀಡಿರುವ ಹೇಳಿಕೆಯ ವಿರುದ್ದ. ಆ ವ್ಯಕ್ತಿಯನ್ನು ಮೆಚ್ಚಿಸಲು ಧರ್ಮವನ್ನು ಎದುರು ತಂದು ಉಳಿದವರ ದಾರಿ ತಪ್ಪಿಸುವ ಅವಶ್ಯಕತೆಯಿಲ್ಲ ಎಂದು ಅವರು ಹೇಳಿದರು.

ನಾನು ನಮ್ಮ ದೈವ-ದೇವರುಗಳ ಸಾಕ್ಷಿಯಾಗಿ ಹಿಂದೂ ಧರ್ಮಕ್ಕೆ ತಲೆಬಾಗಿ ನಡೆಯುತ್ತಿದ್ದೇನೆ ಎಂದು ಪ್ರಮಾಣ ಮಾಡುತ್ತೇನೆ ಈ ರೀತಿ ಪ್ರಮಾಣ ಮಾಡುವ ಧೈರ್ಯ ಪೋಸ್ಟ್ ಹಾಕಿದ ಕಾಂಜಿಪಿಂಜಿಗಳಿಗೆ ಇದೆಯೇ? ಈಗ ಯಾವುದೇ ರಾಜಕೀಯ ಪಕ್ಷವನ್ನು ಮೆಚ್ಚಿಸಲು ನನ್ನ ಹಿಂದುತ್ವದ ಪ್ರಶ್ನೆ ಮಾಡುವವ ಗಂಡಸಾದರೆ ಎದುರು ನ್ಯೂಸ್ ಚಾನಲ್ ಗೆ ಬಂದು ಡಿಬೇಟ್ ಅಲ್ಲಿ ಮಾತನಾಡು. ನನ್ನ ಹಿಂದುತ್ವ ಏನು ಅಂತ ನಿನಗೆ ನಾನು ಬೋಧನೆ ಮಾಡುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ.

- Advertisement -

Related news

error: Content is protected !!