Sunday, April 28, 2024
spot_imgspot_img
spot_imgspot_img

ಹಿಜಾಬ್-ಕೇಸರಿ ಶಾಲು ವಿವಾದ; ರಾಜ್ಯಾದ್ಯಂತ ಇಂದಿನಿಂದ ಕಾಲೇಜ್ ಓಪನ್, ಕಾಲೇಜ್​ಗಳಲ್ಲಿ ಖಾಕಿ ಕಣ್ಗಾವಲು

- Advertisement -G L Acharya panikkar
- Advertisement -

ಹಿಜಾಬ್-ಕೇಸರಿ ಶಾಲು ವಿವಾದ ಇಡೀ ರಾಜ್ಯವನ್ನು ಆತಂಕಕ್ಕೆ ನೂಕಿದೆ. ಇದರಿಂದಾಗಿ ಒಂದು ವಾರದಿಂದ ಬಂದ್ ಆಗಿದ್ದ ಕಾಲೇಜ್ಗಳ ಬಾಗಿಲು, ಇಂದು ಓಪನ್ ಆಗ್ತಿವೆ. ಕಾಲೇಜಿನಲ್ಲಿ ಕಿಡಿ ಮತ್ತೆ ಹೊತ್ತಿಕೊಳ್ಳುತ್ತಾ ಅನ್ನೋ ಟೆನ್ಷನ್ ಹೆಚ್ಚಾಗಿದೆ. ಇದು ಸರ್ಕಾರಕ್ಕೆ ಮತ್ತೊಂದು ಚಾಲೆಂಜ್ ಎದುರಾಗಿದ್ದು, ಎಲ್ಲಾ ಕಾಲೇಜುಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಹಿಜಾಬ್-ಕೇಸರಿ ಶಾಲಿನ ವಿವಾದ ವಿದ್ಯಾ ದೇಗುಲದಲ್ಲಿ ದಳ್ಳುರಿಯನ್ನೇ ಎಬ್ಬಿಸಿದೆ. ಹಿಜಾಬ್ ಜ್ವಾಲೆ ರಾಜ್ಯಾದ್ಯಂತ ಕಾಲೇಜುಗಳಲ್ಲಿ ಕೆಂಡವಾಗಿದ್ವು. ಫೆ. 8 ರಂದು ಅಂದ್ರೆ ವಾರದ ಹಿಂದೆ ಇಡೀ ಕಾಲೇಜ್ ಆವರಣವೇ ರಣಾಂಗಣವಾಗಿತ್ತು. ಖಾಕಿ ಲಾಠಿ ಸದ್ದು ಮಾಡಿತ್ತು. ಉಡುಪಿ ಎಂಜಿಎಂ ಕಾಲೇಜಿನಲ್ಲಿ ದೊಡ್ಡ ಕದನವೇ ನಡೆದಿತ್ತು. ಶಿವಮೊಗ್ಗದಲ್ಲಿ ಕಲ್ಲುತೂರಾಟ ನಡೆದು ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಿತ್ತು. ಇನ್ನೂ ದಾವಣಗೆರೆಯಲ್ಲಿ ಅಶ್ರುವಾಯು ಸಿಡಿಸಿ ಪರಿಸ್ಥಿತಿ ಹತೋಟಿಗೆ ತರಲಾಗಿತ್ತು. ಲಾಠಿ ಚಾರ್ಜ್ ನಡೆದು ದೊಡ್ಡ ದಂಗೆಯೇ ಎದ್ದಿತ್ತು. ಕಾಲೇಜ್ ರಣಾಂಗಣವಾದ ಬಳಿಕ ಸರ್ಕಾರ ಫೆಬ್ರವರಿ 9ರಿಂದ 15ರ ವರೆಗೆ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಒಂದು ವಾರದ ಬಳಿಕ ಅಂದ್ರೆ ಇಂದಿನಿಂದ ಕಾಲೇಜಿನ ಬಾಗಿಲು ತೆರೆಯುತ್ತಿವೆ.

vtv vitla
vtv vitla

ರಾಜ್ಯಾದ್ಯಂತ ಇಂದಿನಿಂದ ಕಾಲೇಜ್ ಓಪನ್
ಕಾಲೇಜು ಆರಂಭಕ್ಕೂ ಮೊದಲೇ ಮೊನ್ನೆಯಿಂದ ಶುರುವಾಗಿರುವ ಹೈಸ್ಕೂಲ್‌ಗಳಲ್ಲಿ ಹಿಜಾಬ್‌ ವಿವಾದ ಬಗೆಹರಿದಿಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿಯೇ ಶಾಲೆಗೆ ಬರುತ್ತಿದ್ದಾರೆ. ಹಿಜಾಬ್‌ ಇದ್ದರಷ್ಟೇ ಶಿಕ್ಷಣ. ಹಿಜಾಬ್‌ ಇಲ್ಲದೆ ಶಿಕ್ಷಣ ಬೇಕಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರ ನಡುವೆಯೇ ಇಂದಿನಿಂದ ಕಾಲೇಜ್ ಓಪನ್ ಆಗ್ತಿದ್ದು, ಟೆನ್ಷನ್ ಹೆಚ್ಚಾಗಿದೆ. ಪೊಲೀಸ್ ಭದ್ರತೆಯಲ್ಲಿ ಕಾಲೇಜು ಆರಂಭಿಸುತ್ತೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದ್ದಾರೆ.

ಕಾಲೇಜುಗಳಲ್ಲಿ ಖಾಕಿ ಕಣ್ಗಾವಲು
ಇಂದಿನಿಂದಲೇ ಕಾಲೇಜು ಆರಂಭಕ್ಕೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಕಾಲೇಜಿನಲ್ಲಿ ದಂಗೆ ಎದ್ದಿದ್ದ ನಂತ್ರ ಮೊದಲು ಮೂರು ದಿನ ನಂತರ ಎರಡು ದಿನ ರಜೆ ಕೊಟ್ಟಿದ್ದ ಸರ್ಕಾರ ಕಡೆಗೂ ಇಂದಿನಿಂದ ಕಾಲೇಜುಗಳನ್ನು ಪುನರಾರಂಭ ಮಾಡ್ತಿದೆ. ಕಾಲೇಜುಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್‌ ಇಲಾಖೆ ಸಜ್ಜಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಕಾಲೇಜು ಆರಂಭದ ಬಗ್ಗೆ ಮೊನ್ನೆ ಮಹತ್ವದ ಸಭೆ ನಡೆಸಿದ್ದ ಸಿಎಂ ಬೊಮ್ಮಾಯಿ, ಖಡಕ್ ಸೂಚನೆ ಕೊಟ್ಟಿದ್ದಾರೆ. ಗದ್ದಲದಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಇದೇ ಕಾರಣದಿಂದ ಶಾಲಾ ಕಾಲೇಜು ಆರಂಭಿಸೋಣ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಅಂತಾ ಸೂಚನೆ ಕೊಟ್ಟಿದ್ದಾರೆ. ಇಂದಿನಿಂದ ಪಿಯು ಡಿಗ್ರಿ ಸೇರಿ ಎಲ್ಲಾ ಕಾಲೇಜುಗಳನ್ನ ಓಪನ್ ಮಾಡಲು ನಿರ್ಧರಿಸಿರೋ ಸರ್ಕಾರ, ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಂಡಿದೆ. ಒಂದು ವೇಳೆ ಪರಿಸ್ಥಿತಿ ಬಿಗಾಡಿಯಿಸಿದರೇ, ಆಯಾ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ ಸೂಕ್ಷ್ಮವಾಗಿ ಗಮನಿಸಬೇಕು ಹೀಗಾಗಿ ಶಾಲಾ ಆಡಳಿತ ಮಂಡಳಿ ಜೊತೆ ನಿಕಟ ಸಂಪರ್ಕದಲ್ಲಿರಿ. ಪೋಷಕರಿಗೆ ದೈರ್ಯ ತುಂಬಿ ಅವರ ಮನವೊಲಿಸುವ ಕೆಲಸವನ್ನ ಮಾಡಿ ಎಂದು ಸಿಎಂ ಸೂಚನೆ ಕೊಟ್ಟಿದ್ದಾರೆ. ಅಲ್ಲದೇ, ಧಾರ್ಮಿಕ ಮುಖಂಡರ ಜತೆ ಚರ್ಚಿಸಿ ಸಹಕಾರ ಪಡೆಯಿರಿ. ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಶಿಕ್ಷಣ ಸಚಿವರು ಹೆಚ್ಚು ಸಂಪರ್ಕದಲ್ಲಿರಿ. ಇದಕ್ಕೆ ಒಂದು ತಾರ್ಕಿಕ ಅಂತ್ಯವಾಡಲೇಬೇಕು. ಯಾರಾದ್ರು ಪ್ರಚೋದನೆ ಮಾಡುವ ಕೆಲಸ ಮಾಡಿದರೇ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ. ಮಕ್ಕಳಲ್ಲಿ ಶಾಂತಿ ಸೌಹಾರ್ದತೆ ಮೂಡುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ತಿಳಿಸಿ ಎಂದು ಸಿಎಂ ಸೂಚಿಸಿದ್ದಾರೆ.

- Advertisement -

Related news

error: Content is protected !!