Tuesday, June 23, 2026
spot_imgspot_img
spot_imgspot_img

ಹೃದಯಾಘಾತದಿಂದ ವಿದ್ಯಾರ್ಥಿ ಮೃತ್ಯು

- Advertisement -
- Advertisement -
vtv vitla

ಶಿವಮೊಗ್ಗ: 10ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ಜ. 11 ರಂದು ಸಂಭವಿಸಿದೆ.

ಜಯಂತ್ ರಜತಾದ್ರಯ್ಯ ಮೃತಪಟ್ಟ ವಿದ್ಯಾರ್ಥಿ. ಆನವಟ್ಟಿ ಜೂನಿಯರ್ ಕಾಲೇಜಿನಲ್ಲಿ ಓದುತ್ತಿದ್ದ ಜಯಂತ್ ಬೆಳಗ್ಗೆ ಶಾಲೆಗೆ ತೆರಳುವ ಸಂದರ್ಭದಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ. ಜಯಂತ್ ಎಂದಿನಂತೆ ಬೆಳಗ್ಗೆ ಎದ್ದು ಶಾಲೆಗೆ ಹೋಗಲು ಮನೆಯಲ್ಲಿ ರೆಡಿಯಾಗುತ್ತಿದ್ದ. ಈ ವೇಳೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಜಯಂತ್‌ನನ್ನು ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಹೃದಯಾಘಾತದಿಂದ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

- Advertisement -

Related news

error: Content is protected !!