Sunday, November 15, 2026
spot_imgspot_img
spot_imgspot_img

ಕಾಸರಗೋಡಿನಲ್ಲಿ ಮಾದಕವಸ್ತು ಬೇಟೆ: vlogger ಹೈದರ್ ಮಧೂರು ಬಂಧನ

- Advertisement -
- Advertisement -

ಕಾಸರಗೋಡು: ಮಾದಕವಸ್ತು ಎಂಡಿಎಂಎ ಸಹಿತ vlogger ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಹೈದರ್ ಮಧೂರು (41) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾನಗರ ಪೊಲೀಸರು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ತಂಡ ಜಂಟಿಯಾಗಿ ನಡೆಸಿದ ವಾಹನ ತಪಾಸಣೆ ವೇಳೆ ಮಾದಕ ವಸ್ತು ಸಹಿತ ಹೈದರ್ ನನ್ನು ಬಂಧಿಸಿದ್ದಾರೆ.

ಖಚಿತ ಮಾಹಿತಿಯ ಆಧಾರದ ಮೇಲೆ ಕೆಲವು ವಾರಗಳಿಂದ DANSAF ತಂಡ ಆರೋಪಿಯ ಚಲನವಲನಗಳ ಮೇಲೆ ನಿಗಾ ಇರಿಸಿತ್ತು. ತಪಾಸಣೆ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ಆತನನ್ನು ಪರಿಶೀಲಿಸಿದಾಗ ಬಚ್ಚಿಟ್ಟಿದ್ದ 3.61 ಗ್ರಾಂ ಎಂಡಿಎಂಎ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾದಕ ವಸ್ತುವನ್ನು ಸ್ವಂತ ಬಳಕೆ ಹಾಗೂ ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆ ಯಲ್ಲಿ ತಿಳಿದುಬಂದಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾ ಗಿದೆ. ಮಾದಕವಸ್ತುವಿನ ಮೂಲದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!